ಸುಳ್ಯ: ಸ್ವಚ್ಛ ಸುಳ್ಯ ತಂಡ ಮತ್ತು ಹೈ ಟೊರ್ಕ್ ಕ್ರೆವ್ ಗ್ರೂಪ್ ಸಹಭಾಗಿತ್ವದಲ್ಲಿ ಸುಳ್ಯ ನಗರದಲ್ಲಿ ನಡೆದ ಪ್ಲಾಸ್ಟಿಕ್ ತ್ಯಾಜ್ಯ ಶೋಧನಾ ಜಾಥಾದಲ್ಲಿ ಸಂಗ್ರಹಿಸಿದ್ದು ಲೋಡ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ…!.
ಚೆನ್ನಕೇಶವ ದೇವಾಲಯದ ಆವರಣದಿಂದ ಆರಂಭಗೊಂಡ ದ್ವಿಚಕ್ರ ವಾಹನ ಜಾಥಾದ ಮೂಲಕ ನಗರದ ಮೂಲೆ ಮೂಲೆಗಳಲ್ಲಿ ಸೇರಿಕೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ತಂದು ವಿಲೇವಾರಿ ಮಾಡಲಾಯಿತು.
ಸುಮಾರು 50 ಕ್ಕಿಂತ ಹೆಚ್ಚಿನ ಬೈಕ್ ಸವಾರರು ಎಡೆ ಬಿಡದೆ ಸುರಿದ ಮಳೆಯನ್ನೂ ಲೆಕ್ಕಿಸದೆ ಸುಳ್ಯ ನಗರದ ಮುಖ್ಯ ರಸ್ತೆಗಳಲ್ಲಿ ಮತ್ತು ಒಳ ರಸ್ತೆಗಳಲ್ಲಿ ಸಂಚರಿಸಿ ದಾರಿಯುದ್ದಕ್ಕೂ ಬಿದ್ದಿದ್ದ ರಾಶಿ ಗಟ್ಟಲೆ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ತಂದರು. ಬೆಳಿಗ್ಗೆ 10 ರಿಂದ ಆರಂಭಗೊಂಡು ಮಧ್ಯಾಹ್ನ ಎರಡು ಗಂಟೆಯವರೆಗೂ ಮುಂದುವರಿದ ಕಾರ್ಯಾಚರಣೆಯಲ್ಲಿ ಸುಮಾರು ನಾಲ್ಕು ಲೋಡ್ ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.
ಪ್ಲಾಸ್ಟಿಕನ್ನು ಶೋಧಿಸಿ ತಂದು
ವಿಲೇವಾರಿ ಮಾಡುವ ಮೂಲಕ ಜನರಲ್ಲಿ ಮುಂದೆ ಪ್ಲಾಸ್ಟಿಕ್ ಉಪಯೋಗಿದಂತೆ ಜಾಗೃತಿ ಮೂಡಿಸುವ ವಿಭಿನ್ನ ರೀತಿಯ ಚಳುವಳಿ ಇದಾಗಿತ್ತು.
ಸುಳ್ಯ ನಗರದಲ್ಲಿ ಆ.15ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲು ನಿರ್ಧರಿಸಲಾಗಿದ್ದು ಈ ಹಿನ್ನಲೆಯಲ್ಲಿ
ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಪರಿಸರ ಹಾನಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಚಾಲನೆ ನೀಡಿದ ಜಾಥಾದಲ್ಲಿ ಸುಳ್ಯ ಎಸ್ಐ ಎಂ.ಆರ್.ಹರೀಶ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸ್ವಚ್ಛ ನಗರ ಸುಳ್ಯ ತಂಡದ ವಿನೋದ್ ಲಸ್ರಾದೋ, ಲೋಕೇಶ್ ಗುಡ್ಡೆಮನೆ, ವಕೀಲ ಕೆ.ಎಲ್.ಪ್ರದೀಪ್ ಕುಮಾರ್, ಡಿ.ಎಸ್. ಗಿರೀಶ್, ಕೆ.ಆರ್. ಮನಮೋಹನ್, ಸುಂದರ ರಾವ್, ರಾಮಚಂದ್ರ. ಪಿ, ಡಿ.ಎಂ ಶಾರೀಖ್, ನ.ಪಂ. ಸದಸ್ಯರಾದ ಶರೀಪ್ ಕಂಠಿ, ಬುದ್ಧ ನಾಯ್ಕ್, ನ.ಪಂ.ಆರೋಗ್ಯಾಧಿಕಾರಿ ರವಿಕೃಷ್ಣ, ಯುವ ಬ್ರಿಗೇಡ್‌ನ ಶರತ್ ಪರಿವಾರ್, ಹೈ ಟೊರ್ಕ್ ಮೊಟೊ ಕ್ರೆವ್ ಗ್ರೂಪ್‌ನ ಮಯೂರ್, ಕೌಶಲ್, ದೀಕ್ಷಿತ್ ರಾವ್, ಸಂಪ್ರೀತ್, ಸಚಿನ್, ಸನತ್ ಮತ್ತಿತರರು ಕೈ ಜೋಡಿಸಿದರು. ಕೆಲ ಹೊತ್ತು ಮೂರು ಮಂದಿ ವಿದೇಶಿ ಪ್ರವಾಸಿಗರು ಕೂಡ ತಂಡಕ್ಕೆ ಸಾಥ್ ನೀಡಿ ಗಮನ ಸೆಳೆದರು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…