ಧರ್ಮಸ್ಥಳ : ಸಮಗ್ರ ಸೃಷ್ಟಿಯೇ ಚಲನಶೀಲವಾಗಿದ್ದು ಚಲನೆಯ ಸಮಗ್ರ ತತ್ವ ಬಳಸಿ ಶ್ರೀಚಕ್ರ ರಚಿಸಲಾಗುತ್ತದೆ. ಪ್ರಕೃತಿಯಲ್ಲಿರುವ ಪಂಚಭೂತಗಳಲ್ಲಿಯೂ ದೇವರನ್ನು ಕಾಣುವ ನಾವು ಸಾಮಾನ್ಯವಾಗಿ ವಿಗ್ರಹ, ಮಂಡಲ ಮತ್ತು ಅಗ್ನಿ ಮೂಲಕ ಭಗವಂತನ ಆರಾಧನೆ ಮಾಡುತ್ತೇವೆ ಎಂದು ಕಾಸರಗೋಡಿನ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಹೇಳಿದರು.
ಅವರು ಶನಿವಾರ ರಾತ್ರಿ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶ್ರೀಚಕ್ರದ ಮಹತ್ವದ ಬಗ್ಯೆ ಉಪನ್ಯಾಸ ನೀಡಿದರು. ಭಗವಂತನ ಆರಾಧನೆಗೆ ಮಂಡಲಗಳನ್ನು ರಚಿಸುತ್ತಾರೆ. ಆರಾಧನೆ ಮತ್ತು ರಕ್ಷಣೆಗಾಗಿ ಯಂತ್ರಗಳನ್ನು ಬಳಸುತ್ತಾರೆ. ಶ್ರೀಚಕ್ರದಲ್ಲಿ ಬೇರೆ ಬೇರೆ ವಿನ್ಯಾಸಗಳಿವೆ.ಶ್ರೀಚಕ್ರ ವೃತ್ತಾಕಾರದ ರಚನೆಯಿಂದ ಕೂಡಿದ್ದು ಒಂಬತ್ತು ಆವರಣಗಳಿರುತ್ತವೆ. ಶ್ರೀಚಕ್ರ ಆರಾಧನೆ ಅತ್ಯಂತ ಶ್ರೇಷ್ಠವಾಗಿದ್ದು ಬಿಂದುವಿನಿಂದ ಆರಂಭಿಸಿ ಶ್ರೀಚಕ್ರ ರಚನೆ ಮಾಡುತ್ತಾರೆ ಎಂದು ಹೇಳಿ ಶ್ರೀಚಕ್ರ ಆರಾಧನೆಯ ಮಹತ್ವವನ್ನು ವಿವರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…