ಸಂಚಾರಿ ನಿಯಮವನ್ನ ಸರಿಯಾಗಿ ಪಾಲಿಸದಿದ್ದರೆ ಹೆಚ್ಚಿನ ದಂಡಕ್ಕೆ ಒಳಗಾಗುವಿರಿ :ಬೆಳ್ಳಾರೆ ಠಾಣೆಯಿಂದ ಮಾಹಿತಿ

September 3, 2019
11:00 AM

ಬೆಳ್ಳಾರೆ: ಪೋಲಿಸ್ ಇಲಾಖೆಯು ಸಾರ್ವಜನಿಕರಿಗೆ ಮಹತ್ವದ ಮಾಹಿತಿ  ನೀಡಿದೆ. ಇದನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಇಲಾಖೆಯು ಮಹತ್ವದ ಸಂದೇಶ ಹೊರಡಿಸಿದೆ.
ಠಾಣಾ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಹೊಸ ನಿಯಮಕ್ಕೆ ಅಂದರೆ ಕೇಂದ್ರ ಸರಕಾರ ಹೊಸದಾಗಿ ನಿಗದಿಪಡಿಸಿರುವ ಹೆಚ್ಚು ಮೊತ್ತದ ದಂಡಕ್ಕೆ ಒಳಗಾಗುವಿರಿ ಎಂದು ತಿಳಿಯಪಡಿಸಿದೆ. ಆದುದರಿಂದ ವಾಹನ ಚಾಲನೆ ಮಾಡುವಾಗ ತಮ್ಮ ವಾಹನದ ದಾಖಲೆಗಳು ನಿಯಮಗಳನ್ನು ಪಾಲಿಸಿ ನಡೆಯಿರಿ ಎಂದು ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಈರಯ್ಯ ಡಿ ಎನ್ ತಿಳಿಸಿದ್ದಾರೆ.

Advertisement
Advertisement

ಹೆಲ್ಮೆಟ್ ಇಲ್ಲದೆ ಮೋಟಾರು ಸೈಕಲ್ ಚಲಾವಣೆ ಮಾಡಿದಲ್ಲಿ ಹಿಂದಿನ ಮೊತ್ತ 100 ರೂ ಈಗಿನ ದಂಡ 1000 ರೂಪಾಯಿ ಹಾಗೂ 3 ತಿಂಗಳು ಲೈಸೆನ್ಸ್ ರದ್ದು ,

ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದಲ್ಲಿ ಹಿಂದಿನ ಮೊತ್ತ 100 ರೂ ಈಗಿನ ದಂಡದ ಮೊತ್ತ 1000 ರೂ ,

ಮೊಬೈಲ್ ಉಪಯೋಗಿಸಿ ವಾಹನ ಚಲಾವಣೆ ಮಾಡಿದಲ್ಲಿ ಈ ಹಿಂದಿನ ಮೊತ್ತ 100 ಈಗಿನ ಮೊತ್ತ 1000 ಹಾಗೂ 3 ತಿಂಗಳು ಲೈಸೆನ್ಸ್ ರದ್ದು ,

ಕುಡಿದು ವಾಹನ ಚಲಾವಣೆ ಮಾಡಿದಲ್ಲಿ ಈ ಹಿಂದಿನ ಮೊತ್ತ 2000 ,ಈಗಿನ ದಂಡದ ಮೊತ್ತ 10,000 ,

ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಲ್ಲಿ ಈ ಹಿಂದಿನ ಮೊತ್ತ 500 ಈಗಿನ ದಂಡದ ಮೊತ್ತ 5000 ರೂಪಾಯಿ ,

ಅತಿವೇಗದ ವಾಹನ ಚಲಾವಣೆ ಮಾಡಿದಲ್ಲಿ 400 ರೂ ,ಈಗಿನ ದಂಡದ ಮೊತ್ತ ಲಘು ವಾಹನಗಳಿಗೆ 1000 ಘನ ವಾಹನಗಳಿಗೆ 2000 ರೂ ,

ಅಪಾಯಕಾರಿ ವಾಹನ ಚಾಲನೆ ಮಾಡಿದಲ್ಲಿ ಈ ಹಿಂದಿನ ಮೊತ್ತ 1000 ಈಗಿನ ದಂಡದ ಮೊತ್ತ 5000 ರೂ ,

ಪರ್ಮಿಟ್ ಇಲ್ಲದೆ ವಾಹನ ಚಲಾಯಿಸಿದಲ್ಲಿ ಹಿಂದಿನ ಮೊತ್ತ 5000 ರೂ ಈಗಿನ ಮೊತ್ತ 10000 ರೂ ದಂಡ ,

ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನ ಸಾಗಿಸುವುದು ಕಂಡು ಬಂದಲ್ಲಿ ಈ ಹಿಂದಿನ ಮೊತ್ತ 5000 ಈಗಿನ ದಂಡದ ಮೊತ್ತ 1000 ಪ್ರತಿ ಪ್ರಯಾಣಿಕರಿಗೆ ,

ದ್ವಿಚಕ್ರ ವಾಹನದಲ್ಲಿ ಓವರ್ ಲೋಡಿಂಗ್ 100 ರೂ ಈ ಹಿಂದಿನ ಮೊತ್ತ ಈಗಿನ ದಂಡದ ಮೊತ್ತ 2000 ಹಾಗೂ ಲೈಸೆನ್ಸ್ 3 ತಿಂಗಳು ರದ್ದು ,

ವಿಮೆ ಇಲ್ಲದೆ ವಾಹನ ಚಲಾಯಿಸಿ ದಲ್ಲಿ ಈ ಹಿಂದಿನ ದಂಡ 1000 ಈಗಿನ ದಂಡದ ಮೊತ್ತ 2000 ,

ಆಂಬುಲೆನ್ಸ್ ಗೆ ದಾರಿಮಾಡಿ ಕೊಡದಿದ್ದಲ್ಲಿ ಈ ಹಿಂದಿನ ಮೊತ್ತ 1000 ಈಗಿನ ದಂಡದ ಮೊತ್ತ 10000

ಅಪ್ರಾಪ್ತ ರಿಗೆ ವಾಹನ ಚಲಾವಣೆ ಮಾಡಲು ನೀಡಿದರೆ ಈ ಹಿಂದಿನ ದಂಡದ ಮೊತ್ತ 1000 ಆದರೆ ಈಗಿನ ದಂಡದ ಮೊತ್ತದ್ದಂತೆ 25,000 ,3 ವರುಷ ಗಳ ಕಾಲ ಜೈಲು ಶಿಕ್ಷೆ ,ವಾಹನದ ನೊಂದಣಿ ರದ್ದಾಗಲಿರುವುದು.

ಪ್ರಸ್ತುತ ಕೇಂದ್ರ ಸರಕಾರ ವು ಇತ್ತೀಚಿನ ಕೆಲವೊಂದು ಸನ್ನಿವೇಶಗಳು ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ ಅದಕ್ಕೆ ಸೂಕ್ತವಾಗಿ ಹಿಂದಿನ ದರಕ್ಕಿಂತ ದಂಡವನ್ನು ಹೆಚ್ಚಿಸಿ ಸಾರ್ವಜನಿಕ ರೆಲ್ಲರಿಗೂ ಎಚ್ಚರಿಕೆ ಯ ಸಂದೇಶ ರವಾನಿಸಿದ್ದು ಇಲ್ಲವಾದಲ್ಲಿ ಸಾರ್ವಜನಿಕ ರು ದುಪ್ಪಟ್ಟು ದಂಡಕ್ಕೆ ಒಳಗಾಗಿ ಅದನ್ನ ಯಾವುದೇ ಮುಲಾಜಿಲ್ಲದೆ ಭರಿಸಬೇಕಾದ ಕ್ರಮಕ್ಕೆ ಒಳಗಾಗುತ್ತೀರಿ ಹಾಗಾಗಿ ಮೇಲೆ ತಿಳಿಸಿದ ದಂಡವನ್ನ ಸಾರ್ವಜನಿಕ ರು ಎಚ್ಚರದಿಂದ ಗಮನಿಸಿ, ಇಲಾಖೆ ಹೊರಡಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ , ವಾಹನ ಚಲಾಯಿಸಿರಿ ಎಂದು ಠಾಣಾಧಿಕಾರಿ ಈರಯ್ಯ ಡಿ ಎನ್ ಮಾಹಿತಿ ನೀಡಿದ್ದಾರೆ.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror