Advertisement
MIRROR FOCUS

ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ..! ಕೊಡಗಿನಲ್ಲಿ ಮನೆಬಾಗಿಲಿಗೆ ಆಧಾರ್…!

Share

 

Advertisement
Advertisement
Advertisement

ಆಧಾರ್ ನೋಂದಣಿ ಈಗ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆಯೂ ಸಮಸ್ಯೆಗಳ ಸುಳಿ. ಈ ಸಂದರ್ಭದಲ್ಲಿ ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಸರಕಾರಗಳು ಸೂಕ್ತ ನಿರ್ದೇಶನ ನೀಡಬೇಕು. ಈಗಲೂ ಅನೇಕ ಮಂದಿಗೆ ಆಧಾರ್ ಕಾರ್ಡ್ ಆಗಿಲ್ಲ, ಆಧಾರ್ ತಿದ್ದುಪಡಿಯೂ ಆಗಿಲ್ಲ. ಇಂತಹ ಸಂದರ್ಭದಲ್ಲಿ ಕೊಡಗು ಜಿಲ್ಲಾಡಳಿತ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮೊಬೈಲ್ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ. ಕಳೆದ ಹಲವಾರ ಸಮಯಗಳಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾಧಿಕಾರಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಬಗೆಹರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ನೀಡುವ ದೂರಿಗೆ ಅತಿ ಶೀಘ್ರದಲ್ಲಿ ಸ್ಪಂದಿಸಿ ಪರಿಹಾರ, ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.

Advertisement

 

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮೊಬೈಲ್ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ವಿಶೇಷವಾಗಿ ಗಿರಿಜನ ಹಾಡಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಜಿಲ್ಲೆಯ ಸುಮಾರು 167 ಹಾಡಿಗಳಲ್ಲಿ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಯಲಿದೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಗ್ರ ಗಿರಿಜನ ಯೋಜನಾ ಇಲಾಖೆಯಿಂದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು  ಸೋಮವಾರ (ಇಂದು) ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ವಿವಿಧ ಹಾಡಿಗಳಲ್ಲಿ ಸುಮಾರು 15 ದಿನಗಳ ಕಾಲ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದ್ದು, ಗಿರಿಜನ ಹಾಡಿಯ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿ ಸಿ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಮಾತ್ರವಲ್ಲ ಇತರ ಜಿಲ್ಲೆಗಳಲ್ಲೂ ಇಂತಹದ್ದೊಂದು ಅಭಿಯಾನ ನಡೆಸುವ ಮೂಲಕ ಆಧಾರ್ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಬಹುದಾಗಿದೆ. 

Advertisement

 ಆಧಾರ್ ನೋಂದಣಿ ವಿವರ ಹೀಗಿದೆ : ಜು.15 ರಿಂದ ಆ.28 ರವರೆಗೆ ಸಂಚಾರಿ ಸಂಚಾರಿ ವಾಹನದ ಮೂಲಕ ಆಧಾರ್ ನೋಂದಣಿ ಕಾರ್ಯಕ್ರಮ ನಡೆಯಲಿದೆ.  ಜು.15ರಂದು ಕುಟ್ಟ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಚಳ್ಳಿಯ ಸಿಂಕೋನ ಹಾಗು ಕುಟ್ಟ ನಾತಂಗಾಲ ಹಾಡಿಯ ಗಿರಿಜನರಿಗಾಗಿ ಕಾರ್ಯಕ್ರಮ ನಡೆಯಲಿದ್ದು, 16ರಂದು ನಾಣಚ್ಚಿಗದ್ದೆ ಹಾಡಿ, ಕೇಂಬುಕೊಲ್ಲಿ, ಚಂದನಕೆರೆ ಹಾಡಿಯವರಿಗಾಗಿ ನಾಣಚ್ಚಿಗದ್ದೆ ಸರಕಾರಿ ಶಾಲೆಯಲ್ಲಿ, ಜು.17ರಂದು ನಾಗರಹೊಳೆ ಹಾಗೂ ಗೋಣಿಗದ್ದೆ ಹಾಡಿಯವರಿಗೆ ನಾಗರಹೊಳೆ ಆಶ್ರಮ ಶಾಲೆ, 18ರಂದು ನಿಟ್ಟೂರು, ತಟ್ಟೆಕೆರೆ, ದಾಳಿಂಬೆತೋಟ, ಬೆಂಡೆಗುತ್ತಿ, ಕೊಲ್ಲಿಹಾಡಿಯವರಿಗಾಗಿ ನಿಟ್ಟೂರು ಆಶ್ರಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಜು.19ರಂದು ಕೋತೂರು ಮಲ್ಲಂಗೆರೆ ಹಾಡಿ ಹಾಗೂ ಬ್ರಹ್ಮಗಿರಿಯವರಿಗೆ ಕೋತೂರು ಆಶ್ರಮ ಶಾಲೆ, 20ರಂದು ಶ್ರೀಮಂಗಲದ ಬಣ್ಣಮೊಟ್ಟೆ, ಕುಮಟೂರಿನ ನೆಮ್ಮಲೆ, ಬೀರುಗದ ವೆಸ್ಟ್‍ನೆಮ್ಮಲೆ, ಈಸ್ಟ್‍ನೆಮ್ಮಲೆ, ಕುರ್ಚಿ ಗ್ರಾಮದ ತಾವಳಗೇರಿಯ ಕುರ್ಚಿ, ಹರಿಹರದ ಶ್ರೀಮಂಗಲ ಲೈನ್‍ಮನೆಯವರಿಗೆ ಹಾಗೂ ಕಾಕೂರಿನ ಆದಿವಾಸಿಗಳಿಗೆ ಶ್ರಿಮಂಗಲ ಸರಕಾರಿ ಶಾಲೆ, 22ರಂದು ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಪೊರಾಡು, ಹುದಿಕೇರಿ, ಹೈಸೊಡ್ಲೂರು, ಹೈಸೊಡ್ಲೂರು ಟಿ ಎಸ್ಟೇಟ್, ಕೋಣಗೇರಿ, ಚೀಣಿವಾಡ, ಬೇಗೂರು ಗ್ರಾಮದ ನಿವಾಸಿಗಳಿಗೆ ಹುದಿಕೇರಿಯಲ್ಲಿ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದೆ.

Advertisement

ಆ.1ರಂದು ಹಾತೂರು ಸರಕಾರಿ ಮಾದರಿ ಶಾಲೆಯಲ್ಲಿ ಕೊಳತ್ತೋಡು, ಬೈಗೋಡು, ಕೈಕೇರಿ, ಕುಂದ, ಅತ್ತೂರು, ಈಚೂರು, ಆ.2ರಂದು ಬಿಟ್ಟಂಗಾಲ ಸರಕಾರಿ ಮಾದರಿ ಶಾಲೆಯಲ್ಲಿ 2ನೇ ರುದ್ರಗುಪ್ಪೆ, ರುದ್ರಗುಪ್ಪೆ, ಬಿ.ಬಾಡಗ, ಬಿಟ್ಟಂಗಾಲ, ನಾಮಗಾಲ, 1ನೇ ರುದ್ರಗುಪ್ಪೆ, ಕಂಡಂಗಾಲ ಅಂಬಟ್ಟಿ, ಬಾಳುಗೋಡು ಹಾಗೂ ಅಂಬಟ್ಟಿ-1 ಗ್ರಾಮದವರಿಗೆ ಕಾರ್ಯಕ್ರಮ ನಡೆಯಲಿದೆ.

ಆ.3ರಂದು ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಸರಕಾರಿ ಶಾಲೆಯಲ್ಲಿ ವಾಲ್ನೂರು ತ್ಯಾಗತ್ತೂರು, ಬಾಳೆಗುಂಡಿ, ಆ.5ರಂದು ನಂಜರಾಯಪಟ್ಟಣ ಸರಕಾರಿ ಶಾಲೆಯಲ್ಲಿ ಮಾವಿನಹಳ್ಳ, ರಂಗಸಮುದ್ರ, ಹೊಸಪಟ್ಟಣ, ಕಬ್ಬಿನಗದ್ದೆ,ಕಟ್ಟೆಹಾಡಿಯವರಿಗೆ, ಆ.6ರಂದು ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಹೆಬ್ಬೆಟ್ಟಗೇರಿ, ಚಿಕ್ಕಬೆಟ್ಟಗೇರಿ, ಹೊಸಕಾಡು ಹಾಡಿಯವರಿಗೆ, ಆ.7ರಂದು ಹೇರೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಕೂರು ಶಿರಂಗಾಲ, ಕಲ್ಲೂರು ಗ್ರಾಮದವರಿಗೆ, 8ರಂದು ಯಡವನಾಡು ಆಶ್ರಮಶಾಲೆಯಲ್ಲಿ ಗಂಧದ ಹಾಡಿ, ಸೀತಾಕಾಲೋನಿ, ಕೂಪಾಡಿ, ಸೂಳೆಬಾವಿ, ರಂಗನಹಾಡಿ ಹಾಗೂ ಸಜ್ಜಳ್ಳಿ ಹಾಡಿಯವರಿಗೆ ಕಾರ್ಯಕ್ರಮ ನಡೆಯಲಿದೆ.

Advertisement

ಆ.9ರಂದು ಬ್ಯಾಡಗೊಟ್ಟ ಪುನರ್ವಸತಿ ಬಡಾವಣೆಯಲ್ಲಿ ಹುಣಸೆಪಾರೆ, ಯಲಕೂರು ಹೊಸಳ್ಳಿ, ಚಿನ್ನೇಹಳ್ಳಿ, ಹೆಗ್ಗಡಳ್ಳಿಯವರಿಗೆ, ಆ.13ರಂದು ಅಬ್ಬೂರುಕಟ್ಟೆಯಲ್ಲಿ ಹಿತ್ಲಮಕ್ಕಿ, ಚಿಕ್ಕ ಅಬ್ಬೂರು, ವಳಗುಂದ, ಆಡಿನಾಡೂರು, ಹಳೆ ಮದಲಾಪುರದವರಿಗೆ, ಆ.14ರಂದು ಗಣಗೂರು ಪಂಚಾಯಿತಿಯಲ್ಲಿ ಗಣಗೂರು ಎಡುಂಡೆ, ಊಂಜಿಗನಹಳ್ಳಿ, ಬಾಣಾವರ, ಸಂಗಯ್ಯನಪುರ, ಗೋಣಿಮರೂರು ಗ್ರಾಮದ ಆದಿವಾಸಿಗಳಿಗೆ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದೆ.

ಆ.16ರಂದು ಮಾಲಂಬಿ ಆಶ್ರಮಶಾಲೆಯಲ್ಲಿ ಮಾಲಂಬಿ, ಪಳಗೋಟುಹಾಡಿ. ಕಡ್ಲೆಮಕ್ಕಿ, ಆಲೂರುಸಿದ್ಧಾಪುರ, ಆ.17ರಂದು ದೊಡ್ಡಳ್ಳಿ ಸರಕಾರಿ ಶಾಲೆಯಲ್ಲಿ ಹಾರೆ ಹೊಸೂರು ಬ್ಯಾಡಗೊಟ್ಟ, ಕಟ್ಟೆಪುರ ಹಾಡಿಯವರಿಗೆ, 19ರಂದು ಗರಗಂದೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗರಗಂದೂರು ಗ್ರಾಮದ ಆದಿವಾಸಿಗಳಿಗೆ ಕಾರ್ಯಕ್ರಮ ನಡೆಯಲಿದೆ.

Advertisement

ಆ.20 ರಂದು ಮಡಿಕೇರಿ ತಾಲೂಕಿನ ಮದೆನಾಡು ಪಂಚಾಯತ್ ನಲ್ಲಿ ಬೆಟ್ಟತ್ತೂರು, ಜೋಡುಪಾಲ, ದೇವರಕೊಲ್ಲಿಯವರಿಗೆ , ಆ.21ರಂದು ಸಂಪಾಜೆ ಪಂಚಾಯತ್ ನಲ್ಲಿ ಕೊಯನಾಡು, ಮಂಗಳಪಾರೆ, ಕುಂಟಿಕಾನ,ಅರೆಕಲ್ಲು,  ಆ.22ರಂದು ಬಾಲಂಬಿ ಗ್ರಾಮ ಪಂಚಾಯತ್ ನಲ್ಲಿ ಕಟ್ಟಪಳ್ಳಿ, ಕುದ್ರೆಪಾಯದವರಿಗೆ,  23ರಂದು ಪೆರಾಜೆ ಕುಂಬಳಚೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿಡ್ಯಮಲೆ, ಕುಂಡಾಡು,  ಆ.24ರಂದು ಕರಿಕೆ ಆಶ್ರಮ ಶಾಲೆಯಲ್ಲಿ ಚೆತ್ತುಕಾಯ, ಎಳ್ಳುಕೊಚ್ಚಿ, ಕುಂಡತ್ತಿಕಾನ,  ಆ.26ರಂದು ಚೆಯ್ಯಂಡಾಣೆ ಸರಕಾರಿ ಶಾಲೆಯಲ್ಲಿ ಯವಕಪಾಡಿ, ಚೇಲಾವರ,  27ರಂದು ತಣ್ಣಿಮಾನಿ, ಕೋಪಟ್ಟಿ ಚೇರಂಗಾಲ, ಕೋರಂಗಾಲದವರಿಗಾಗಿ ಭಾಗಮಂಡಲ ಪಂಚಾಯತ್ ನಲ್ಲಿ ಹಾಗೂ  ಆ.28ರಂದು ಗಾಳಿಬೀಡು ಪಂಚಾಯತ್ ನಲ್ಲಿ  ಗಾಳಿಬೀಡು ಹಾಗೂ 2ನೇ ಮೊಣ್ಣಂಗೇರಿಯವರಿಗೆ ಆಧಾರ್ ನೋಂದಣಿ ಕಾರ್ಯಕ್ರಮ ನಡೆಯಲಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

11 hours ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

17 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

17 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

17 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

18 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

1 day ago