ಸಂಪಾಜೆ: ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಪಾಜೆಯ ಯುವತಿಯರ ಬಳಗದಿಂದ ಪಂಚಾನನ ಭಜನಾ ಮಂಡಳಿ ಗುಂಪನ್ನು ರಚನೆ ಮಾಡಲಾಯಿತು. ಪಂಚಾನನ ಭಜನಾಮಂಡಳಿ ಗುಂಪಿನಿಂದ ಶ್ರೀ ದೇವರ ಭಜನೆ ಮಾಡುವ ಮೂಲಕ ಗುಂಪನ್ನು ಕಾರ್ಯರೂಪಕ್ಕೆ ತರಲಾಯಿತು.
ಕಾರ್ಯಕ್ರಮದಲ್ಲಿ ಪಯಶ್ವಿನಿ ಯುವತಿ ಮಂಡಲದ ಸದಸ್ಯೆ ಮತ್ತು ಭಜನಾ ಶಿಕ್ಷಕಿ ಲೀಲಾವತಿ ಗೋಪಾಲ್ ದಂಪತಿಗಳನ್ನು ಅವರ ವಿದ್ಯಾರ್ಥಿ ವೃಂದದಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್, ಗ್ರಾಮ ಪಂಚಾಯತ್ ಸದಸ್ಯರಾದ ರಮಾದೇವಿ ಕಳಗಿ, ಶ್ರೀ ಪಂಚಲಿಂಗೇಶ್ವರ ಆಡಳಿತ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಕಳಗಿ, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮೀನಾಕುಮಾರಿ ಶಶಿಧರ್, ಬಾಳೆಹಿತ್ಲು ಪುರುಷೋತ್ತಮ, ಹೇಮಾವತಿ ಬಾಳೆಹಿತ್ಲು, ನಳಿನಿ ರಾಜಾರಾಮ್ ಕಳಗಿ, ಬಾಲಕೃಷ್ಣ ಬಾಳೆಹಿತ್ಲು, ಗೋಪಾಲ ಕಲಾಯಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಬಿ’ ಒಕ್ಕೂಟದ ಅಧ್ಯಕ್ಷರಾದ ಭಾರತಿ ಚಂದ್ರಶೇಖರ್ ರವರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel