ಒಣಗಿ ಹೋದ ಮರದ ಮೇಲೆ
ಕುಳಿತ ಪಕ್ಷಿಗೆ ಕಾಡುತ್ತಿದೆ ಚಿಂತೆ
ವಸಂತ ಮಾಸದಲ್ಲೂ ಮರದಲ್ಲಿ
ಚಿಗುರಿಲ್ಲವೆಂದು…
ಅದು ಬಯಸುತ್ತಿದೆ
ಹೂವಿನ ಘಮ,ಹಣ್ಣಿನ ಸ್ವಾದ
ಮತ್ತೆ ಬೇಕೆಂದು
ಅತ್ತು ಕರೆಯುತ್ತಿದೆ ಮಳೆರಾಯನ
ಬಂದು ಚಿಗುರಿಸಬಾರದೇ ಮರವನ್ನ?
ಆದರೆ ಪಕ್ಷಿಗೇನು ಗೊತ್ತು?
ಮರ ಸಾಯಲೆಂದು
ಬೇರಿಗೆ ವಿಷವುಣಿಸಿದ ಮನುಜನ ಮರ್ಮ!
ನೆರಳನುಣಿಸಿದ ಮರಕ್ಕೂ
ಗೊತ್ತಿಲ್ಲ ತಾನುಂಡಿದ್ದು ವಿಷವೆಂದು
ಸತ್ತ ಮರವೂ ಕಣ್ಣೀರಿಡುತ್ತಿದೆ
ಬಾರದ ಮಳೆಯ ಶಪಿಸುತ್ತಿದೆ
ಮರದ ಆಶ್ರಯ ಮರೆಯದ
ಪಕ್ಷಿ ಮತ್ತೆ ಹಾಡಲಾರಂಭಿಸಿದೆ
ಮರದ ನೋವ ಮರೆಸಲೆಂದು
ಎಂದೆಂದೂ ಜೊತೆ ನಾನಿರುವೆನೆಂದು…!
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement