ಸುಳ್ಯ: ವಿದ್ಯಾರ್ಥಿಗಳು ಬರಿಯ ಪುಸ್ತಕಗಳಿಗೆ ಮಾತ್ರ ಅಂಟಿಕೊಳ್ಳದೆ ಸಂಶೋಧನಾ ಆಧಾರಿತ ಅಧ್ಯಯನ ನಡೆಸಬೇಕು. ಅದು ಸಿದ್ಧಾಂತದ ಪ್ರಾಯೋಗಿಕ ಅಳವಡಿಕೆ. ಅಂತಹ ಅಧ್ಯಯನದಿಂದ ದೊರೆಯುವ ಜ್ಞಾನ ಸರ್ವಶ್ರೇಷ್ಠವಾದುದು. ಪಾಶ್ಚಾತ್ಯ ದೇಶಗಳು ವೈಜ್ಞಾನಿಕವಾಗಿ ಮುಂದುವರಿಯಲು ಸಂಶೋಧನಾಧರಿತ ಅಧ್ಯಯನವೇ ಕಾರಣ ಎಂದು ನಿವೃತ್ತ ಪ್ರಾಂಶುಪಾಲ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಅವರು ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಸಂಘ ಆಯೋಜಿಸಿದ್ದ ಕಿರು ಸಂಶೋಧನೆ ನಡೆಸುವ ಬಗ್ಗೆ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡಿಸುತ್ತಿದ್ದರು. ಪ್ರೊ. ರತ್ನಾವತಿ ಕೇರ್ಪಳ ಸಭಾಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕ ಪ್ರೊ. ಶ್ರೀಧರ್ ಸ್ವಾಗತಿಸಿ, ಪ್ರೊ. ಗೀತಾ ಪ್ರಭು ವಂದನಾರ್ಪಣೆಗೈದರು. ಪ್ರಾಧ್ಯಾಪಕರುಗಳಾದ ರುದ್ರಕುಮಾರ್, ಯಶ್ವಿತಾ, ಮೀನಾಕ್ಷಿ, ಅಶ್ವಿನಿ, ದಿವ್ಯಾ ಉಪಸ್ಥಿತರಿದ್ದರು.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…