Advertisement
ಅನುಕ್ರಮ

ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದ ಬಗ್ಗೆ ಜನರ ಅಬೋಧ ಅವಸ್ಥೆ

Share

ಸುಮಾರು ಅರ್ಧದಷ್ಟು ಯುವ ಮತ್ತು ಉದ್ಯಮಶೀಲ ಭಾರತೀಯರು ತಮಗಿರುವ ಸಕ್ಕರೆ ಕಾಯಿಲೆ ಮತ್ತು ಏರಿದ ರಕ್ತದೊತ್ತಡದ ಸ್ಥಿತಿಯ ಬಗ್ಗೆ ಅರಿವನ್ನೇ ಹೊಂದಿಲ್ಲ ಎಂದು ವರದಿಯೊಂದು ಹೇಳಿದೆ. ಇದರಿಂದಾಗಿ ಇವರು ವಿವಿಧ ರೀತಿಯ ಜಟಿಲ ಖಾಯಿಲೆಗಳಿಗೆ ತುತ್ತಾಗುತ್ತಾಇದ್ದಾರೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಶೋಧನಾ ತಂಡದ ಅಭಿಪ್ರಾಯ.

ಅತಿಯಾದ ರಕ್ತದೊತ್ತಡ ಇರುವ 55 ಶೇಕಡಾ ಜನರಿಗೆ ತಮಗೆ ರಕ್ತದ ಒತ್ತಡ ಏರಿದ ಸ್ಥಿತಿ ಇದೆ ಎಂದು ತಿಳಿದೇ ಇಲ್ಲ. ಹಾಗೆಯೇ, ಏರಿದ ರಕ್ತದ ಸಕ್ಕರೆ ಅಂಶ 48 ಶೇಕಡಾ ಜನರಿಗೆ ತಾವು ಡಯಾಬಿಟಿಸ್ ರೋಗಿಗಳೆಂದು ತಿಳಿದಿಲ್ಲ. ಈ ಎರಡೂ ಸಂದರ್ಭಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿವೆ.
ರಾಜ್ಯಗಳನ್ನು ಹೆಸರಿಸುವುದಾದರೆ, ಚಿಕಿತ್ಸೆಗೆ ಒಳಪಡದ ಸಕ್ಕರೆ ಕಾಯಿಲೆ ರೋಗಿಗಳು ಅತ್ಯಂತ ಹೆಚ್ಚಾಗಿರುವ ರಾಜ್ಯಗಳೆಂದರೆ ತಮಿಳುನಾಡು ಮತ್ತು ಉತ್ತರ ಪ್ರದೇಶ. ಚಿಕಿತ್ಸೆಗೆ ಒಳಪಡದ ರಕ್ತದ ಒತ್ತಡ ಕಾಯಿಲೆಯ ರೋಗಿಗಳು ಅತ್ಯಂತ ಹೆಚ್ಚಾಗಿರುವ ರಾಜ್ಯಗಳೆಂದರೆ ಪುದುಚೇರಿ, ತಮಿಳುನಾಡು, ಸಿಕ್ಕಿಂ ಮತ್ತು ಹರಿಯಾಣ. ಅತ್ಯಂತ ಹೆಚ್ಚು ರೋಗಿಗಳು, ಈ ಕಾಯಿಲೆಗಳನ್ನು ಹೊಂದಿದ್ದರೂ, ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ.
ಏಳು ಲಕ್ಷಕ್ಕೂ ಅಧಿಕ, 15ರಿಂದ 49 ವರ್ಷದ ವ್ಯಕ್ತಿಗಳನ್ನು ಅಧ್ಯಯನ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆ-4 ರ 2015-16 ರ ಫಲಿತಾಂಶದ ಪ್ರಕಾರ ಈ ತೀರ್ಮಾನಗಳನ್ನು ಮಾಡಲಾಗಿದೆ.

ಭಾರತವು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡವನ್ನು ಒಳಗೊಂಡಂತೆ, ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಹುದೊಡ್ಡ ಹೊರೆಯಿಂದ ಕುಸಿದು ಹೋಗುತ್ತಿದೆ. ಸಕ್ಕರೆ ಕಾಯಿಲೆ ನಿಯಂತ್ರಣದ ಪ್ರತಿಯೊಂದು ಹೆಜ್ಜೆಯಲ್ಲೂ ನ್ಯೂನತೆ ಉಂಟಾಗುತ್ತಿದೆ. ಅದರಲ್ಲೂ ಅರಿವು ಮೂಡಿಸುವ ಆರಂಭದ ಹೆಜ್ಜೆಗಳು ಭಾರತದಲ್ಲಿ ದುರ್ಬಲವಾಗಿವೆ ಎಂದು ಬಿ .ಎಂ .ಸಿ ಮೆಡಿಸಿನ್ ವರದಿ ಮಾಡಿದೆ.
ರಕ್ತದೊತ್ತಡದ ಬಗ್ಗೆ ಅರಿವನ್ನು ಹೊಂದಿ, ಚಿಕಿತ್ಸೆ ಪಡೆದು ನಿಯಂತ್ರಣ ಹೊಂದಿದವರ ಸಂಖ್ಯೆ ಕಡಿಮೆ. ಆದುದರಿಂದ ಹಳ್ಳಿ ಪ್ರದೇಶಗಳಲ್ಲಿ ಹಾಗೂ ಕಡಿಮೆ ಆದಾಯ ಹೊಂದಿರುವ ವರಲ್ಲಿ ಇದನ್ನು ಪತ್ತೆ ಹಚ್ಚುವ, ಜಾಗೃತಿ ಮೂಡಿಸುವ, ಚಿಕಿತ್ಸೆ ನೀಡುವ, ಮೌಲ್ಯಮಾಪನ ಮಾಡುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳು ತೀವ್ರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪ್ಲೋಸ್ (PLoS) ಮೆಡಿಸಿನ್ ವರದಿಮಾಡಿದೆ. ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ, ಜರ್ಮನಿಯ ಹೈಡೆಲ್ಬರ್ಗ್ ಯುನಿವರ್ಸಿಟಿ, ಯುಎಸ್ಎ ಬಾಸ್ಟನ್ ನ ಹಾರ್ವರ್ಡ್ ಟಿ ಎಚ್ ಚಾನ್ ಸ್ಕೂಲ್ ಆಫ್
ಪಬ್ಲಿಕ್- ಇವೆಲ್ಲದರ ತಜ್ಞರು ಸೇರಿಕೊಂಡು ಈ ಅಧ್ಯಯನ ನಡೆಸಿದ್ದಾರೆ.” ಗ್ರಾಮೀಣ ಪ್ರದೇಶಗಳಲ್ಲಿ ಪತ್ತೆಹಚ್ಚುವ ಹಾಗೂ ತಡೆಗಟ್ಟುವ ತಪಾಸಣೆಗಳು ಇಲ್ಲವೇ ಇಲ್ಲ. ಕಾಯಿಲೆ ಲಕ್ಷಣಗಳನ್ನು ಪ್ರಕಟಿಸಿದಾಗ ಅಥವಾ ಉಲ್ಬಣಾವಸ್ಥೆ ತಲುಪಿದಾಗ ಮಾತ್ರ ಜನರು ತಪಾಸಣೆಗೆ ಮುನ್ನುಗ್ಗುತ್ತಾರೆ. ಆದರೆ ಮಹಿಳೆಯರಲ್ಲಿ ಮಾತ್ರ ಪರಿಸ್ಥಿತಿ ಇಷ್ಟೊಂದು ಕೆಟ್ಟದಾಗಿಲ್ಲ. ಏಕೆಂದರೆ ಗರ್ಭಿಣಿಯರು ತಪಾಸಣೆಗೆ ಹೋದಾಗ ರಕ್ತದ ಸಕ್ಕರೆ ಹಾಗೂ ರಕ್ತದೊತ್ತಡವನ್ನು ಪರೀಕ್ಷಿಸಲಾಗುತ್ತದೆ. ಆದುದರಿಂದ ಮಹಿಳೆಯರಿಗಿಂತ ಪುರುಷರಲ್ಲಿ ಪತ್ತೆಯಾಗದ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಸಂದರ್ಭಗಳು ಹೆಚ್ಚಾಗಿವೆ” ಎಂದು ಈ ಅಧ್ಯಯನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ , ಪಿ .ಎಚ್ .ಎಫ್. ಐ. ಸಂಶೋಧಕರಾದ ಆಶಿಶ್ ಅವಸ್ಥಿ ತಿಳಿಸಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

View Comments

  • ಉತ್ತಮ ಬರಹ..ಜನಸಾಮಾನ್ಯರು ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಕಾದಿದೆ..ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರತವಾಗಬೇಕಾಗಿದೆ..

Published by
ಮಿರರ್‌ ಡೆಸ್ಕ್‌

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

20 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago