ಸತತ 4 ನೇ ದಿನವೂ 100 ಮಿಮೀ ಮಳೆ ದಾಟಿದೆ. ಇಷ್ಟು ದಿನವೂ ರೆಡ್ ಅಲರ್ಟ್..!. ಹಲವು ಕಡೆ ಸಂಕಷ್ಟ, ಇನ್ನೂ ಹಲವರಿಗೆ ಸಮಸ್ಯೆ…! .ಈ ನಡುವೆ ಸಹಾಯಕ್ಕೆ ಬಂದವರು ಹಲವರು. ಅಧಿಕಾರಿಗಳು ಎಲ್ಲೆಲ್ಲಾ ಓಡಾಡಿದರು, ಊಟ ಸವಿದರು. ಜನಪ್ರತಿನಿಧಿಗಳಿಗೆ ಕೆಲಸವೇ ಇಲ್ಲವಾಯಿತು….! ಈ ಕಡೆಗೆ ಫೋಕಸ್..
ಮಳೆಯ ರುದ್ರ ನರ್ತನ ಮುಂದುವರಿದಿದೆ. ಸುಳ್ಯ ತಾಲೂಕಿನ ಕಲ್ಮಕಾರು ,ಬಾಳುಗೋಡು, ಸುಬ್ರಹ್ಮಣ್ಯ, ಸಂಪಾಜೆ ಮುಂತಾದ ಗ್ರಾಮಗಳಲ್ಲಿ ಮಳೆಯು ತನ್ನ ಭೀಕರತೆಯನ್ನು ಪ್ರದರ್ಶಿಸಿದೆ. ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಹಲವು ಮನೆಗಳಿಗೆ ನೀರು ನುಗ್ಗಿ ಅವರು ಗಂಜೀ ಕೇಂದ್ರಗಳಲ್ಲಿ ವಾಸಿಸುವಂತೆ ಆಗಿದೆ. ಜಿಲ್ಲಾಡಳಿತವೂ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದೆ.
ಕಲ್ಮಕಾರಿನಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಸುಳ್ಯ ತಹಶೀಲ್ದಾರ್ ಭೇಟಿ ನೀಡಿದರು.
ಮಳೆ ಪೀಡಿತ ಕಲ್ಮಕಾರು ಗಂಜಿ ಕೇಂದ್ರಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿದೆ. ಶ್ರೀ ದೇವರ ಅನ್ನ ಪ್ರಸಾದವನ್ನು ಒದಗಿಸಲಾಗುತ್ತಿದೆ. ಅಲ್ಲದೇ ದೇವಾಲಯದಿಂದ ಚಾಪೆ,ಹೊದಿಕೆಗಳನ್ನು ಉಚಿತವಾಗಿ ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಯುವಕರ ತಂಡವೂ ಅಹಾರವನ್ನು ಗಂಜಿ ಕೇಂದ್ರಕ್ಕೆ ಒದಗಿಸುವ ಕಾರ್ಯವನ್ನು ನಿರಂತರವಾಗಿ ಅಚ್ಚುಕಟ್ಟಾಗಿ ಮಾಡುತ್ತಿದೆ. ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್ ಪಂಜ ಹಾಗೂ ಇತರರು ತಮ್ಮ ಕಾರಿನಲ್ಲಿ ಸುಮಾರು 25 ಕಿಮೀ ದೂರದ ಕಲ್ಮಕಾರಿಗೆ ತಲಪಿಸಿ ಮಾನವೀಯ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಶಾಲೆಯಲ್ಲಿ ತೆರೆಯಲಾದ ಕಲ್ಮಕಾರು ಗಂಜಿ ಕೇಂದ್ರದಲ್ಲಿ 10 ಕುಟುಂಬದ 26 ಮಂದಿ ಅಶ್ರಯ ಪಡೆದಿದ್ದಾರೆ.
ಪ್ಲಡ್ ರೆಸ್ಕ್ಯೂ ವಾಲಿಂಟಿಯರ್ ಗ್ರೂಪ್ ನ ಸದಸ್ಯರೂ ಕೇಂದ್ರಕ್ಕೆ ಭೇಟಿ ನೀಡಿದರು.
ಮಳೆ ಕಡಿಮೆಯಾಗದಿದ್ದಾರೆ , ಸುಬ್ರಹ್ಮಣ್ಯ ಹಾಗೂ ಕಲ್ಮಕಾರು ನಡುವಿನ ರಸ್ತೆ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆ ಇದ್ದು ಆ ಸಂದರ್ಭದಲ್ಲಿ ಗಂಜಿ ಕೇಂದ್ರದಲ್ಲೆ ಆಹಾರ ತಯಾರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಿಂತನೆ ನಡೆದಿದೆ.
ಕೆಲವು ಕಡೆ ಮೂರ್ನಾಕು ದಿನಗಳಿಂದ ವಿದ್ಯುತ್ ವ್ಯವಸ್ಥೆ ಇಲ್ಲವಾಗಿದೆ. ಗಾಳಿಗೆ ಮರ ಬಿದ್ದು ಹಾನಿಯಾಗಿದೆ. ಹೀಗಾಗಿ ಜನರೇ ಗಡಿಬಿಡಿ ಇಲ್ಲ ಎನ್ನುತ್ತಾ ಹೀಗೊಂದು ಸಂದೇಶ ನೀಡಿದ್ದಾರೆ,
ಪ್ರೀತಿಯ ಲೈನ್ ಮೆನ್ ಅವರುಗಳಿಗೆ
ಮಳೆಯ ಆರ್ಭಟ ನಿಲ್ಲುವವರೆಗೂ ಕರೆಂಟ್ ಇಲ್ಲ ಅಂದ್ರು ಪರವಾಗಿಲ್ಲ. ನಾವು ನಿಮಗೆ ಬೈಯೊಲ್ಲ, ಕಿರಿಕಿರಿ ಮಾಡಲ್ಲ, ಒತ್ತಡ ಹೇರಲ್ಲ. ಧಾರಾಕಾರ ಮಳೆ-ಗಾಳಿ ಇದೆ. ಕಂಬಗಳು ಜಾರುತ್ತವೆ- ಬಾಗುತ್ತವೆ. ಮಣ್ಣು ಸಡಿಲವಾಗಿ ಮರಗಳು ತಂತಿಮೇಲೆ ಉರುಳಿ ಕಂಬಗಳ ಮುರಿಯುತ್ತಿವೆ. ದಯಮಾಡಿ ನಿಮ್ಮ ರಕ್ಷಣೆ ಮೊದಲು ಆಧ್ಯತೆ ಕೊಡಿ. ನಮ್ಮಂತೆಯೆ ನಿಮಗೂ ಕುಟುಂಬವಿದೆ.
ಈ ಬೀಕರ ಮಳೆಯಲ್ಲಿ ನೀವು ಸರ್ಕಸ್ ರೀತಿಯಲ್ಲಿ ದುರಸ್ಥಿ ಕಾರ್ಯಮಾಡಿ ನಮ್ಮಗಳಿಗೆ ಬೆಳಕು ನೀಡಿ ನಿಮ್ಮ ಕುಟುಂಬ ಕತ್ತಲೆಯಲ್ಲಿ ಕವಿಯುವುದು ಬೇಡವೇ ಬೇಡ..
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 30 ರಿಂದ ಡಿಸೆಂಬರ್ 3 ರವರೆಗೆ ಸಾಧಾರಣ…
ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಮೈಕೊರೆವ ಚಳಿ ಶುರುವಾಗಿದೆ. ಮತ್ತೊಂದೆಡೆ ಚಂಡ ಮಾರುತದ…
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…