ಬೆಳ್ಳಾರೆ: ಸಮಾಜದ ಆಧಾರಸ್ತಂಭಗಳ ತಯಾರಕ ಒಬ್ಬ ಶಿಕ್ಷಕ. ಅಂಧಕಾರವೆಂಬ ಅಜ್ಞಾನದೊಳಗಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ತರಬಲ್ಲವನು ಗುರು ಮಾತ್ರ. ಅಡುಗೆಗೆ ಹೇಗೆ ಎಲ್ಲವೂ ಅಗತ್ಯವೋ ಅಂತೆಯೆ ವಿದ್ಯಾರ್ಥಿಯ ಪರಿಪಕ್ವತೆಗೆ ಎಲ್ಲವೂ ಅಗತ್ಯವಿದೆ ಎಂದು ಆಂಗ್ಲಭಾಷಾ ಉಪನ್ಯಾಸಕ ಎಂ.ಕೆ ರಾಮಚಂದ್ರ ಭಟ್ ಹೇಳಿದರು.
Advertisement
ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡದರು. ಅರ್ಥಶಾಸ್ತ್ರ ಉಪನ್ಯಾಸಕ ವಿಶ್ವನಾಥ ಗೌಡ ಮಾತನಾಡಿ ಶಿಕ್ಷಕರಿಗೂ ಮನಸ್ಸಿದೆ ಎಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಡುತ್ತಿದ್ದಾರೆ. ಗುರುವಿನ ಆಶೀರ್ವಾದವಿದ್ದವು ಗೆಲುವಿನ ಸರಮಾಲೆಯನ್ನೆ ತೊಡುವನು ಎಂದರು.
Advertisement
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ ಪ್ರಾಂಶುಪಾಲೆ ಹಸೀನಾ ಬಾನು, ರಸಾಯನ ಶಾಸ್ತ್ರ ಉಪನ್ಯಾಸಕಿ ಅನಿತಾ ಶುಭಹಾರೈಸಿದರು. ವೇದಿಕೆಯಲ್ಲಿ ಇತಿಹಾಸ ಉಪನ್ಯಾಸಕಿ ವೀಣಾ, ಕನ್ನಡ ಉಪನ್ಯಾಸಕಿ ರಮ್ಯ, ವಾಣಿಜ್ಯ ಭವಿತಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement