ಕೊಡಗು ಚೆಂಬು:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಊರುಬೈಲು ಚೆಂಬು ಶಾಲೆಯಲ್ಲಿ ಗಾಂಧೀಜಯಂತಿ ದಿನಾಚರಣೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ದಿನಾಚರಣೆ. ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಭಾ,ಕಾರ್ಯಕ್ರಮದಲ್ಲಿ ಗ್ರಾ.ಪಂ. ಚೆಂಬು ಇದರ ಅಧ್ಯಕ್ಷರಾದ ಶ್ರೀಯುತ ದಿನೇಶ್ ಕುಮಾರ್ ಮಾತನಾಡಿ “ದೇಶ ಕಂಡ ಮಹಾನ್ ಕಣ್ಮಣಿಗಳಾದ ಈ ಇಬ್ಬರ ಆದರ್ಶ ತತ್ವ”ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾತನಾಡಿದರು. ಹಾಗೆಯೇ ವಿದ್ಯಾಭಿಮಾನಿಗಳಾದ ಶ್ರೀಯುತ ವಾಸುದೇವ ನಿಡಿಂಜಿ ಮಾತನಾಡಿ ” ಈ ಮಹಾನ್ ವ್ಯಕ್ತಿಗಳ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಅವರ ಧ್ಯೇಯ ವಾಕ್ಯಗಳೊಂದಿಗೆ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ನಾವೆಲ್ಲಾರು ಪಾಲ್ಗೊಳ್ಳೋಣ” ಎಂದು ಹಿತನುಡಿದರು.
ಸಭೆಯಲ್ಲಿ ಎಸ್.ಡಿ.ಎಂ ಸಿ ಅಧ್ಯಕ್ಷರು ಶ್ರೀಯುತ ಗಣೇಶ ಪಿ.ಟಿ. , ಗ್ರಾ.ಪಂ.ಚೆಂಬು ಸದಸ್ಯೆ ಶ್ರೀಮತಿ ಲೀಲಾವತಿ ಯು.ಆರ್, ಮುಖ್ಯೋಪಾಧ್ಯಾಯರಾದ ಶ್ರೀಯುತ ಸೋಮಣ್ಣ ಕೆ.ಆರ್ ಹಾಗೂ ಎಸ್.ಡಿ.ಎಂ.ಸಿ. ಸರ್ವ ಸದಸ್ಯರುಗಳು, ಶಾಲಾ ಶಿಕ್ಷಕ-ಸಿಬ್ಬಂಧಿ ವೃಂಧ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸ್ವಚ್ಛ ಭಾರತ – ಗಾಂಧೀ ಕನಸಿನ ಅಂಗವಾಗಿ ಶಾಲೆಯ ಸುತ್ತಾ ಮುತ್ತಾ ಶ್ರಮದಾನ ಕಾರ್ಯವನ್ನು ಮಾಡಲಾಯಿತು. ಕಾರ್ಯಕ್ರಮವನ್ನು ಶ್ರೀ ವಿಕ್ರಾಂತ ಎಂ ಬಿ ಅ.ಶಿಕ್ಷಕರು ಸ್ವಾಗತಿಸಿ ನಿರೂಪಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.