ಸವಣೂರು : ಸರ್ವೆಗ್ರಾಮದ ಕಲ್ಲಮ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 346ನೇ ಆರಾಧನ ಮಹೋತ್ಸವದ ಅಂಗವಾಗಿ ಆ.18ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.
ಆ.16ರಂದು ಬೆಳಿಗ್ಗೆ ಪೂರ್ವಾರಾಧನೆ ,ಪೂಜೆ ,ಅಭಿಷೇಕ ,ಅಷ್ಟೋತ್ತರ ಮಹಾಪೂಜೆ ,ಶ್ರೀ ನಂದಿಕೇಶ್ವರ ದೇವರಿಗೆ ಏಕದಶ ರುದ್ರಾಭಿಷೇಕ ನಡೆಯಿತು.ಸಾಯಂಕಾಲ ಶ್ರೀ ಸತ್ಯನಾರಾಯಣ ಪೂಜೆ ,ರಾತ್ರಿ ರಂಗಪೂಜೆ,ಮಹಾಮಂಗಳಾರತಿ ,ಉತ್ಸವ ಪ್ರಸಾದ ವಿತರಣೆ ನಡೆಯಿತು.
ಆ.17 ರಂದು ಆರಾಧನೆ ,ಬೆಳಿಗ್ಗೆ ಪೂಜೆ ,ಪಂಚಾಮೃತ ಸೀಯಾಳಭಿಷೇಕ ,ಅಲಂಕಾರ ಪೂಜೆ ,ಮಹಾಪೂಜೆ ,ಮಧ್ಯಾಹ್ನ ಅನ್ನಸಂತರ್ಪಣೆ ,ಸಂಜೆ ಭಕ್ತಕೋಡಿ ಶ್ರೀ ಗುರುರಾಘವೇಂದ್ರ ಭಕ್ತವೃಂದ ದಿಂದ ಭಜನೆ ,ರಾತ್ರಿ ಮಹಾಮಂಗಳಾರತಿ ,ಉತ್ಸವ ಪ್ರಸಾದ ವಿತರಣೆ ನಡೆಯಿತು.
ಆ.18ರಂದು ಉತ್ತರಾರಾಧನೆ ,ಬೆಳಿಗ್ಗೆ ಪೂಜೆ , ಅಭಿಷೇಕ ,ಅಷ್ಟೋತ್ತರ ಮಹಾಪೂಜೆ ,ಸಂಜೆ ಆನಾಜೆ ಮಹಾವಿಷ್ಣು ಸೇವಾ ಸಮಿತಿಯಿಂದ ಭಜನೆ ,ರಾತ್ರಿ ರಂಗಪೂಜೆ,ಉತ್ಸವ ,ಮಹಾಮಂಗಳಾರತಿ ,ಪ್ರಸಾದ ವಿತರಣೆ ನಡೆಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement