ಸವಣೂರು : ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಸವಣೂರು ಗ್ರಾ.ಪಂ.ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ಮನವಿ ಸಲ್ಲಿಸಿದರು.
ವಸತಿ ಯೋಜನೆಯ ವಿವಿಧ ಹಂತದ ಕಾಮಗಾರಿಯ ಮನೆಗಳಿಗೆ ಹಣ ಬಿಡುಗಡೆ ಮಾಡಲು, ವಸತಿ ಯೋಜನೆಯಲ್ಲಿ ಹೊಸ ಮನೆಗಳನ್ನು ಒದಗಿಸುವುದು ಮತ್ತು ಅನುದಾನ ಹೆಚ್ಚಳ ಮಾಡುವುದು, ಗ್ರಾ.ಪಂ.ರಸ್ತೆಗಳನ್ನು ಡಾಮರೀಕರಣಗೊಳಿಸಲು ಅನುದಾನ ನೀಡುವಂತೆ, ಸವಣೂರು ರೈಲ್ವೇ ಹಳಿ ದಾಟುವಲ್ಲಿ ಮೇಲಂತಸ್ತಿನ ರಸ್ತೆ ನಿರ್ಮಾಣ ಮಾಡುವುದು, ಬಿಪಿಎಲ್ ಪಡಿತರ ಚೀಟಿ ರದ್ದತಿಯ ಗೊಂದಲದ ಸಮಸ್ಯೆ ಪರಿಹರಿಸುವ ಕುರಿತು, ಗ್ರಾಮ ಪಂಚಾಯತ್‍ಗಳಿಗೆ ಅನುದಾನ ಹೆಚ್ಚಳ ಮಾಡುವಂತೆ, ಗ್ರಾ.ಪಂ.ಅಧ್ಯಕ್ಷರ/ಉಪಾಧ್ಯಕ್ಷರ/ಸದಸ್ಯರ ಗೌರವಧನ ಹೆಚ್ಚಳ ಮಾಡುವಂತೆ, ಸಾರ್ವಜನಿಕ ಕೆರೆಗಳ ಅಭಿವೃದ್ದಿಗೆ ಅನುದಾನ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯೆ ಸುಧಾ ನಾಗರಾಜ್ ನಿಡ್ವಣ್ಣಾಯ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ನಾರಾಯಣ ಬಟ್ಟೋಡಿ ಹಾಜರಿದ್ದರು.