ಸವಣೂರು :ರಕ್ತದಾನ ಶ್ರೇಷ್ಟ ದಾನ.ರಕ್ತದಾನದಿಂದ ಒಂದು ಜೀವ ಉಳಿಸಿದ ಪುಣ್ಯಪ್ರಾಪ್ತಿಯಾಗುತ್ತದೆ,ಆದರಿಂದ ರಕ್ತದಾನಿಗಳು ದೇವರಿಗೆ ಸಮಾನ ಎಂದು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಹೇಳಿದರು.
ಅವರು ಸವಣೂರು ವಿನಾಯಕ ಸಭಾಭವವನದಲ್ಲಿ ಪುತ್ತೂರು ತಾಲೂಕು ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ಒಕ್ಕೂಟ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಸ.ಪ್ರಥಮ ದರ್ಜೆ ಕಾಲೇಜು ಬೆಳಂದೂರು, ಶ್ರೀ ಕ್ಲಿನಿಕಲ್ ಲ್ಯಾಬೋರೇಟರಿ ಸವಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ವತಿಯಿಂದ ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ,ವರ್ತಕರ ಸಂಘ ಸವಣೂರು,ಶಾರಾದಾಂಬಾ ಸೇವಾ ಸಂಘ ಸವಣೂರು ಇದರ ಸಹಕಾರದೊಂದಿಗೆ ನಡೆದ ಸ್ವಯಂ ಪ್ರೇರಿತ ರಕ್ತದಾನ ಮತ್ತು ವರ್ಗೀಕರಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 53 ಬಾರಿ ರಕ್ತದಾನ ಮಾಡಿದ ಸವಣೂರು ಯುವಕ ಮಂಡಲ ಹಾಗೂ ಜನಜಾಗೃತಿ ವೇದಿಕೆಯ ಸವಣೂರು ವಲಯದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಧ್ವನಿವರ್ದಕ ಮತ್ತು ದೀಪಾಲಂಕಾರ ಮ್ಹಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು,ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಗಿರಿಶಂಕರ ಸುಲಾಯ, ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ,ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ತಾ.ಒಕ್ಕೂಟದ ಗೌರವಾಧ್ಯಕ್ಷ ಹೆನ್ರಿ ಡಿಸೋಜ,ಅನ್ವರ್ ವೆರೈಟಿ ಕಡಬ ,ಬೆಳಂದೂರು ಕಾಲೇಜಿನ ಪ್ರಾಚಾರ್ಯ ಪ್ರೋ.ಪದ್ಮನಾಭ ಕೆ , ಶ್ರೀ ಕ್ಲಿನಿಕಲ್ ಲ್ಯಾಬೋರೇಟರಿಯ ಮನೋಜ್ ಪಾರೆರಾ, ರೋಟರ್ಯಾಕ್ಟ್ ಕ್ಲಬ್ ಸ.ಪ್ರಥಮ ದರ್ಜೆ ಕಾಲೇಜು ಬೆಳಂದೂರುನ ಅಧ್ಯಕ್ಷ ಸುಶಾಂತ್, ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ಒಕ್ಕೂಟದ ಕಾರ್ಯದರ್ಶಿ ಮನೋಹರ ಶೆಟ್ಟಿ, ಉಪಾಧ್ಯಕ್ಷ ದಾವೂದ್ , ಸಹಕಾರ್ಯದಶಿ ನವೀನ್ ಕೋಶಾ„ಕಾರಿ ಸಿಪ್ರಿಯನ್ ಮೊರಾಸ್,ಸಂಘಟನಾ ಕಾರ್ಯದರ್ಶಿಗಳಾದ ಅಶ್ರಫ್ ,ಚಂದ್ರಹಾಸ ಆಳ್ವ ಶಿವಕೃಪಾ ,ಸೀತಾರಾಮ ಬಲ್ನಾಡು,ಸುರೇಶ್ ಗುರುಜ್ಯೋತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ,ವಂದಿಸಿದರು.ಶಿವಜಿತ್ ವೈ ಪ್ರಾರ್ಥಿಸಿದರು.ಇಡ್ಯಡ್ಕ ಶಾಲಾ ಶಿಕ್ಷಕ ಜಯಂತ ವೈ ಕಾರ್ಯಕ್ರಮ ನಿರೂಪಿಸಿದರು.