ಸವಣೂರು :ತೀರಾ ಬಡತನದಲ್ಲಿರುವ ಸವಣೂರು ಗ್ರಾಮದ ಅರೆಲ್ತಡಿಯ ಕುಸುಮ ಕೆಡೆಂಜಿ ಎಂಬವರಿಗೆ ಅವರ ಮನೆ ನಿರ್ಮಾಣ ಕ್ಕೆ ಮತ್ತು ಮಗಳ ಮದುವೆ ಸಲುವಾಗಿ ಸವಣೂರು ಗ್ರಾ.ಪಂ.ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಸೇರಿ ಒಟ್ಟುಮಾಡಿದ 10,250 ರೂ. ಸಹಾಯಧನವನ್ನು ಅವರ ಮನೆಗೆ ಬೇಟಿ ನೀಡಿ ಹಸ್ತಾಂತರಿಸಲಾಯಿತು.
Advertisement
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ಕುಸುಮಾ ಅವರಿಗೆ ನೆರವು ಹಸ್ತಾಂತರಿಸಿದರು.ಈ ಸಂದರ್ಭ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ ಬಿ.ಕೆ,ಸದಸ್ಯರಾದ ಪ್ರಕಾಶ್ ಕುದ್ಮನಮಜಲು,ಸತೀಶ್ ಅಂಗಡಿಮೂಲೆ,ಸತೀಶ್ ಬಲ್ಯಾಯ,ರಾಜೀವಿ ಶೆಟ್ಟಿ,ವಸಂತಿ ಬಸ್ತಿ,ಗಾಯತ್ರಿ ಬರೆಮೇಲು,ಅಭಿವೃದ್ದಿ ಅಧಿಕಾರಿ ನಾರಾಯಣ ಬಟ್ಟೋಡಿ,ಲೆಕ್ಕ ಸಹಾಯಕ ಎ.ಮನ್ಮಥ,ಸಿಬಂದಿಗಳಾದ ಪ್ರಮೋದ್ ರೈ,ದಯಾನಂದ ಮಾಲೆತ್ತಾರು,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ವೇದಾವತಿ ಕೆಡೆಂಜಿ,ಓಂಕಾರ ಸೇವಾ ಸಮಿತಿಯ ತೀರ್ಥರಾಮ ಕೆಡೆಂಜಿ ಮೊದಲಾದವರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement