ಸವಣೂರು : ಇಲ್ಲಿನ ಪ್ರಸಿದ್ದ ಚಂದ್ರನಾಥ ಬಸದಿ ಹಾಗೂ ಪದ್ಮಾವತಿ ದೇವಿ ಸನ್ನಿಧಿಗೆ ತೆರಳುವ ರಸ್ತೆಯ ಅಭಿವೃದ್ದಿಗೆ ರಾಜ್ಯ ಸಭಾ ಸದಸ್ಯರ ಮೂಲಕ ಅನುದಾನ ದೊರಕಿಸಿಕೊಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸವಣೂರಿನ ನಿಯೋಗ ಬೆಂಗಳೂರಿನಲ್ಲಿ ಅವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದೆ.
ಹಲವು ವರುಷಗಳ ಇತಿಹಾಸ ಹೊಂದಿರುವ ಬಸದಿಯನ್ನು ಸಂದರ್ಶಿಸಲು ನೂರಾರು ಭಕ್ತರು ವಿವಿದೆಡೆಯಿಂದ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯೂ ತೀರಾ ಹದೆಗೆಟ್ಟಿದ್ದು ಇದರಿಂದ ಸಮಸ್ಯೆಯಾಗಿದೆ ಈ ನಿಟ್ಟಿನಲ್ಲಿ ಅನುದಾನ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.
ಬೆಂಗಳೂರಿಗೆ ತೆರಳಿದ ನಿಯೋಗದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸುರೇಶ್ ಕೆ ಪೆರಾಬೆ, ಸವಣೂರು ಗ್ರಾ.ಪಂ.ಸದಸ್ಯರಾದ ಪ್ರಕಾಶ್ ಕುದ್ಮನಮಜಲು, ಸತೀಶ್ ಅಂಗಡಿಮೂಲೆ, ಓಂಕಾರ ಸೇವಾ ಸಮಿತಿಯ ತೀರ್ಥರಾಮ ಕೆಡೆಂಜಿ, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಇದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…