ಸವಣೂರು : ಇಂಟರ್ ನ್ಯಾಷನಲ್ ಯೂತ್ ಸೊಸೈಟಿ ಮತ್ತು ನ್ಯಾಷನಲ್ ಯೂತ್ ಅವಾರ್ಡ್ ಫೆಡರೇಶನ್ ಆಫ್ ಇಂಡಿಯಾ ಇದರ ವತಿಯಿಂದ ಕೊಡಮಾಡುವ 2019ನೇ ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ,ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಅವರಿಗೆ ಆವರ ಮಾತೃಸಂಸ್ಥೆ ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಅ.15ರಂದು ಅಭಿನಂದನ ಕಾರ್ಯಕ್ರಮ ಯುವ ಸಭಾಭವನದಲ್ಲಿ ನಡೆಯಿತು.
ಯುವಕ ಮಂಡಲದ ಮಾರ್ಗದರ್ಶಕ ಗಿರಿಶಂಕರ ಸುಲಾಯ ಅವರು, ಯುವಕ ಮಂಡಲ ಬೆಳೆದುಬಂದ ಹಾದಿ, ಯುವಜನ ಚಟುವಟಿಕೆ ಹಾಗೂ ಪ್ರಶಸ್ತಿ ದೊರಕಲು ಮಾಡಿದ ಶ್ರಮದ ಕುರಿತು ಮಾತನಾಡಿದರು.
ಸಮ್ಮಾನ ಸ್ವೀಕರಿಸಿದ ಸುರೇಶ್ ರೈ ಸೂಡಿಮುಳ್ಳು ಅವರು ಮಾತನಾಡಿ, ನನ್ನ ಎಲ್ಲಾ ಸಾಧನೆಗಳ ಮೂಲ ಮಾತೃಸಂಸ್ಥೆ ಸವಣೂರು ಯುವಕ ಮಂಡಲ. ಯುವಕ ಮಂಡಲದ ಸದಸ್ಯನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದರಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಬರುವಂತಾಗಿದೆ. ತನ್ನ ಬೆಳವಣಿಗೆಗೆ ಯುವಕ ಮಂಡಲದ ಕೊಡುಗೆ ಅಪಾರ. ಯುವಕ ಮಂಡಲಕ್ಕೆ ನಾವು ಯಾವತ್ತೂ ಋಣಿಯಾಗಿರಬೇಕು. ನಮ್ಮ ಸವಣೂರು ಯುವಕ ಮಂಡಲದ ಸದಸ್ಯರು ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆ. ಎಲ್ಲರಿಗೂ ಯುವಕ ಮಂಡಲ ಪ್ರೇರಣಾದಾಯಿ ಎಂದರು.
ಯುವಕ ಮಂಡಲದ ಗೌರವ ಸಲಹೆಗಾರ ಕುಂಜಾಡಿ, ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಸವಣೂರು ಮೆಸ್ಕಾಂ ಜೆಇ ನಾಗರಾಜ್ ಕೆ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಪಿ.ಸವಣೂರು ಅಧ್ಯಕ್ಷತೆ ವಹಿಸಿದ್ದರು. ಸವಣೂರು ವರ್ತಕರ ಸಂಘದ ಪರವಾಗಿ ರಫೀಕ್ ಅರ್ತಿಕೆರೆ , ಮೋಹನ್ ರೈ ಕೆರೆಕ್ಕೋಡಿ, ಐತ್ತಪ್ಪ ಗೌಡ ಹಾಗೂ ವರ್ತಕರು ಅಭಿನಂದಿಸಿದರು.
ಹಿಂದೂ ಜಾಗರಣವೇದಿಕೆಯ ವತಿಯಿಂದ ಪುತ್ತೂರು ನಗರ ಹಿಂ.ಜಾ.ವೇ.ಯ ಗೌರವಾಧ್ಯಕ್ಷ ಕುಂಜಾಡಿ, ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಅಭಿನಂದಿಸಿದರು.
ಸವಣೂರು ವಲಯ ಜನಜಾಗೃತಿ ವೇದಿಕೆಯ ಪರವಾಗಿ ವಲಯಾಧ್ಯಕ್ಷ ಮಹೇಶ್ ಕೆ.ಸವಣೂರು, ಗ್ರಾಮ ಸಮಿತಿ ಸವಣೂರು ಇದರ ಅಧ್ಯಕ್ಷ ತಾರಾನಾಥ ಕೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಸುಪ್ರಿತ್ ರೈ ಖಂಡಿಗ, ನಿರ್ದೇಶಕ ಗಣೇಶ್ ನಾಯ್ಕ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಗ್ರಾ.ಪಂ.ಸದಸ್ಯ ಪ್ರಕಾಶ್ ಕುದ್ಮನಮಜಲು, ಯುವಕ ಮಂಡಲದ ಪೂರ್ವಾಧ್ಯಕ್ಷರಾದ ದಿವಾಕರ ಬಸ್ತಿ, ರಾಜೇಶ್ ರೈ ಮೊಗರು, ಗಂಗಾಧರ ಸುಣ್ಣಾಜೆ, ಗಂಗಾಧರ ಪೆರಿಯಡ್ಕ, ಸಚಿನ ಎಸ್, ದಯಾನಂದ ಮೆದು, ಯತೀಶ್ ಕುಮಾರ್, ಮಾಜಿ ಕಾರ್ಯದರ್ಶಿಗಳಾದ ವಿಶ್ವನಾಥ ಅಮೈ, ಬಾಲಚಂದ್ರ ಕೆ, ರಘು ಎಸ್, ರಾಜೇಶ್ ಇಡ್ಯಾಡಿ, ಸದಸ್ಯರಾದ ಹರೀಶ್ ಕುಕ್ಕುಜೆ, ಸಂಪ್ರಿತ್ ಶೆಟ್ಟಿ ಬಾರಿಕೆ, ರಾಮಕೃಷ್ಣ ಪ್ರಭು, ತೇಜಸ್ ಕನಡಕುಮೇರು, ಜಿತಾಕ್ಷ ಬಿ., ಕೀರ್ತನ್ ಎಂ, ಹೇಮಂತ್ ಮೆದು, ಬಾಬು ದೇವಸ್ಯ, ಸವಣೂರು ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮೆದು, ವಿ.ಸತ್ಯಮೂರ್ತಿ, ತೀರ್ಥರಾಮ ಕೆಡೆಂಜಿ ಮೊದಲಾದವರು ಶುಭ ಹಾರೈಸಿದರು.
ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ, ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ ವಂದಿಸಿದರು. ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.