ಸವಣೂರು : ರಾಮಕೃಷ್ಣ ಮಿಶನ್ ಮಂಗಳೂರು, ಸವಣೂರು ಗ್ರಾಮ ಪಂಚಾಯತ್, ಸವಣೂರು ಯುವಕ ಮಂಡಲ, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ವತಿಯಿಂದ ಸ್ವಚ್ಚ ಪರಿಸರ ನಮ್ಮ ದ್ಯೇಯ ಪರಿಕಲ್ಪನೆಯಲ್ಲಿ ಮುಂಜಾನೆಯ ಸ್ವಚ್ಚತಾ ಕಾಯಕ್ರಮ ಸವಣೂರಿನ ಕನಡಕುಮೇರು ಹಿಂದೂ ರುದ್ರಭೂಮಿಯಲ್ಲಿ ನ.3ರಂದು ಬೆಳಿಗ್ಗೆ 7ರಿಂದ 9 ರವರೆಗೆ ನಡೆಯಿತು.
ಸ್ವಚ್ಚತಾ ಕಾರ್ಯದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ಸತೀಶ್ ಬಲ್ಯಾಯ, ಗಾಯತ್ರಿ ಬರೆಮೇಲು, ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಸಿಬ್ಬಂದಿ ಪ್ರಮೋದ್ ಕುಮಾರ್ ರೈ ಬಿ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸದಸ್ಯರಾದ ಸಂಪ್ರಿತ್ ಶೆಟ್ಟಿ ಬಾರಿಕೆ, ಅಭಿಶೇಕ್ ರೈ ಜೆ, ಪ್ರಥಮ್ ಕಾಯರ್ಗ, ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಜಯರಾಮ ರೈ ಬಿ, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಉಪಾಧ್ಯಕ್ಷ ಹರೀಶ್ ರೈ ಮಂಜುನಾಥನಗರ, ಕಾರ್ಯದರ್ಶಿ ಉದಯ ಬಿ.ಆರ್, ಸದಸ್ಯರಾದ ಸತ್ಯಪ್ರಕಾಶ್ ಶೆಟ್ಟಿ, ನಿತ್ಯಪ್ರಸಾದ್ ಶೆಟ್ಟಿ, ತಾರೇಶ್ ರೈ ಕುಂಜಾಡಿ, ಸಂತೋಷ್ ಮಂಜುನಾಥನಗರ, ಕ್ಯಾಂಪ್ಕೋ ನಿವೃತ ಉದ್ಯೋಗಿ ಸತ್ಯಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.
ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬೇಟಿ: ಸ್ವಚ್ಚತಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅವರು ಭೇಟಿ ಯುವ ಸಂಸ್ಥೆಗಳ ಮುಂಜಾನೆ ಸ್ವಚ್ಚತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ರಾಜ್ಯ ಯುವ ಸಂಘಗಳ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು.