ಸವಣೂರು: ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸೆ.24 ರಂದು ಎನ್ನೆಸೆಸ್ ಸುವರ್ಣ ಮಹೋತ್ಸವ ಆಚರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು, ಸುಮಾರು 4 ಲಕ್ಷಕ್ಕಿಂತಲೂ ಅಧಿಕ ಸ್ವಯಂಸೇವಕರನ್ನು ಹೊಂದಿರುವ ಎನ್ ಎಸ್ ಎಸ್ ಘಟಕವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಘಟಕವಾಗಿದ್ದು, ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಈ ಘಟಕದಿಂದ ಇನ್ನಷ್ಟು ಸೇವೆಗಳು ಸಮಾಜಕ್ಕೆ ಸಿಗುವಂತಾಗಲಿ ಎಂದರು.
ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸೀಮಾ ಜಿ.ಕೆ ಅವರು, ಗಾಂಧೀಜಿಯವರ ಸಹಕಾರ ತತ್ವದ ಕೂಸಾಗಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಇಂದು ವಿದ್ಯಾರ್ಥಿಗಳಲ್ಲಿ ಭದ್ರತೆ, ಸಮಯಪಾಲನೆ, ಆತ್ಮವಿಶ್ವಾಸದಂತಹ ಅನೇಕ ಧನಾತ್ಮಕ ಗುಣಗಳನ್ನು ಬೆಳೆಸುವುದರೊಂದಿಗೆ ಸಮಾಜ ಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲೆ ರಾಜಲಕ್ಷ್ಮಿ ಶೆಟ್ಟಿ ಹಾಗೂ ಎನ್.ಎಸ್.ಎಸ್ ಘಟಕದ ಸಂಘಟಕರು, ವಿದ್ಯಾರ್ಥಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಎನ್.ಎಸ್.ಎಸ್ ಹಾಡಿನೊಂದಿಗೆ ಆರಂಭಗೊಂಡಿತು. ಎನ್.ಎಸ್.ಎಸ್ ನ ಎಲ್ಲ ಸ್ವಯಂ ಸೇವಕರು ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಎನ್.ಎಸ್.ಎಸ್ ಘಟಕದ ಜೊತೆಕಾರ್ಯದರ್ಶಿ ಪ್ರಿಯಾಂಕ ಸ್ವಾಗತಿಸಿ, ಕಾರ್ಯದರ್ಶಿ ಸಂಪ್ರೀತ್ ವಂದಿಸಿದರು. ಎನ್.ಎಸ್.ಎಸ್ ಘಟಕದ ಸ್ವಯಂಸೇವಕರಾದ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel