ಸವಣೂರು: ಇಲ್ಲಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನು ಆಚರಿಸಲಾಯಿತು.ಭಗವಾನ್ ಶ್ರೀಕೃಷ್ಣನ ಪ್ರತಿಮೆಗೆ ಪುಷ್ಪಾರ್ಚನೆಗೈದು ಮಾತನಾಡಿದ ಶಾಲಾ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು , ಶ್ರೀಕೃಷ್ಣನ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ.ಜಗತ್ತು ಕಂಡ ಅತ್ಯುತ್ತಮ ನಿರ್ವಹಣಾ ಶಾಸ್ತ್ರಜ್ಞ ಅಂದರೆ ಶ್ರೀಕೃಷ್ಣ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಭಕ್ತಿವೇದಾಂತ ಅಕಾಡೆಮಿ ಫಾರ್ ಕಲ್ಚುರಲ್ ಅಂಡ್ ಕ್ಯಾರೆಕ್ಟರ್ ಎಜ್ಯುಕೇಶನ್ ಇದರ ಸ್ಥಾಪಕರಾದ ಶರದ್‍ವಿಹಾರಿ ದಾಸ್‍ಮಾತನಾಡಿ ,ಶ್ರೀಕೃಷ್ಣನ ವಿಸ್ತೃತ ಪರಿಚಯವನ್ನು ನೀಡಿದರು.
ಬಳಿಕ 10ನೆ ತರಗತಿ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ವಿಧಾನವನ್ನು ಮನನಮಾಡಿಕೊಟ್ಟರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೃಷ್ಣ ಮತ್ತು ರಾಧೆಯರ ವೇಷಧಾರಣೆ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕರಾದ ಸುಬ್ಯಹ್ಮಣ್ಯ ಭಟ್ ಮತ್ತು ವಿನಯಾ ನಿರ್ಣಾಯಕರಾಗಿದ್ದರು.ಚೇತನಾ ಸ್ಪರ್ಧೆಯನ್ನು ಸಂಘಟಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಸಹಾದಿಯಾ ಅತಿಥಿಗಳ ಪರಿಚಯಿಸಿದರು.
ಸಮಹಿತ್ ಜೈನ್ ಸ್ವಾಗತಿಸಿ , ವೈಷ್ಣವಿ ಎಂ ವಂದಿಸಿದರು.
ಅಕ್ಕಿ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಪರಿವರ್ತಿಸಿದಾಗ ಮಣ್ಣಿನ ನೈಟ್ರೋಜನ್ ಲಭ್ಯತೆ ಕಡಿಮೆಯಾಗುತ್ತದೆ ಎಂದು…
ರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಹಾಗೂ…
ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಬೆಳೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ವ್ಯವಸ್ಥೆಗಳನ್ನು ಸರ್ಕಾರ…
ಉತ್ತರ ಕನ್ನಡದಲ್ಲಿ ಎಲೆಚುಕ್ಕಿ ರೋಗದಿಂದ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಸಾಲ ಮರುಪಾವತಿ ಅವಧಿ…
ಭಾರತದ ಕೃಷಿಯಲ್ಲಿ ಮಹಿಳೆಯರ ಪಾತ್ರ ದಿನೇದಿನೇ ಹೆಚ್ಚುತ್ತಿದೆ. ಸಂಪನ್ಮೂಲ ಹಾಗೂ ನಾಯಕತ್ವ ಅವಕಾಶ…
ಸಾಂಪ್ರದಾಯಿಕ ಗ್ರಾಮೀಣ ತಿನಿಸು ಉಪ್ಪು ಸೊಳೆ ಬೋಳು ಬೆಂದಿ. ಸರಳ ಪದಾರ್ಥಗಳಿಂದ ಸುಲಭವಾಗಿ…