ಸುಳ್ಯ: ಸುಳ್ಯ ತಾಲೂಕು ಸವಿತಾ ಸಮಾಜದ ಮಹಿಳಾ ಘಟಕದ ವತಿಯಿಂದ ಆಟಿ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಸುಳ್ಯ ರಥಬೀದಿಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಪದ್ಮನಾಭ ವಹಿಸಿದ್ದರು. ಕಾರ್ಯದರ್ಶಿ ಭಾರತಿ ಬಂಟ್ವಾಳ್ ಆಟಿ ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಬಾರ್ಬರ್ಸ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಭಂಡಾರಿಯವರು ಹಾಗೂ ಸಮಾಜದ ಹಿರಿಯ ಮಹಿಳೆ ಸರಸ್ವತಿಯವರು ದೀಪ ಬೆಳಗಿ ಉದ್ಘಾಟಿಸಿದರು.
ಆಟಿ ಆಚರಣೆಯ ವಿಚಾರವಾಗಿ ಹರೀಶ್ ಬಂಟ್ವಾಳ್ ಮಾತನಾಡಿದರು. ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಗುರುರಾಜ ಅಜ್ಜಾವರ, ಕಾರ್ಯದರ್ಶಿ ಜಯಪ್ರಕಾಶ್ ಮಂಡಕೋಲು, ಗೌರವಾಧ್ಯಕ್ಷ ವಸಂತ ಮೂರಾಜೆ, ಮಹಿಳಾ ಘಟಕದ ಗೌರವಾಧ್ಯಕ್ಷೆ ಪಲ್ಲವಿ ಪ್ರದೀಪ್, ಯುವ ಘಟಕದ ಕಾರ್ಯದರ್ಶಿ ಉದಯ ಜಟ್ಟಿಪಳ್ಳ, ಖಜಾಂಚಿ ನವೀನ್ ಸೂಂತೋಡು, ಬಾರ್ಬರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಅವಿನಾಶ್ ಕೇರ್ಪಳ, ಖಜಾಂಚಿ ಧನು ಜಟ್ಟಿಪಳ್ಳ, ಮಹಿಳಾ ಘಟಕದ ಖಜಾಂಚಿ ಪ್ರಭಾ ಜಯನಗರ, ದ.ಕ.ಜಿಲ್ಲಾ ವಾದ್ಯಕಲಾವಿದ ಸಂಘದ ಅಧ್ಯಕ್ಷ ಬಾಲಚಂದ್ರ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಷ್ಪಾ ಮೊರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಮಾಜದ ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದ ವಿವಿಧ ಬಗೆಯ ಆಟಿ ಆಹಾರ ವೈವಿಧ್ಯವನ್ನು ಎಲ್ಲರೂ ಸೇರಿ ಸವಿದರು.