ಸುಳ್ಯ: ತಾಲೂಕಿನ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಭಾನುವಾರ ಚುನಾವಣೆ ನಡೆದ ಐವರ್ನಾಡು , ಪಂಜ, ಅರಂತೋಡುಗಳಲ್ಲಿ ಅಚ್ಚರಿಯ ಗೆಲುವು ದಾಖಲಾಗಿದೆ. ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಐವರ್ನಾಡು ಸಹಕಾರಿ ಸಂಘದಲ್ಲಿ ಎನ್ ಎನ್ ಮನ್ಮಥ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ 8 ಸ್ಥಾನಗಳನ್ನು ಗೆದ್ದುಕೊಂಡರೆ, ಈ ಹಿಂದೆ ಅವಿರೋಧವಾಗಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಒಟ್ಟು 12 ಸ್ಥಾನಗಳನ್ನೂ ಗೆದ್ದುಕೊಂಡಿದೆ.
ಪಂಜದಲ್ಲಿ ಚಂದ್ರಶೇಖರ ಶಾಸ್ತ್ರಿ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ, ಎಲ್ಲಾ 12 ಸ್ಥಾನಗಳನ್ನೂ ಈ ತಂಡ ಗೆದ್ದಿದೆ.
ಅರಂತೋಡಿನಲ್ಲಿ ಸಂತೋಷ್ ಕುತ್ತಮೊಟ್ಟೆ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ತಂಡದ ಎಲ್ಲರೂ ಸಹಕಾರ ಭಾರತಿ-ಬಿಜೆಪಿ ನೇತೃತ್ವದ ತಂಡ ಎಂದೇ ಹೇಳಿದೆ.
ಪಂಜದಲ್ಲಿ
ಸುಳ್ಯ ತಾಲೂಕಿನ ಇತಿಹಾಸದಲ್ಲಿ ಬಿಜೆಪಿ-ಸಹಕಾರ ಭಾರತಿ ಅಥವಾ ಸಂಘಪರಿವಾರದ ಸಂಘಟನೆಯಿಂದಲೇ ಅಧಿಕೃತ ಅಭ್ಯರ್ಥಿಗಳಲ್ಲ ಎಂದು ಘೋಷಣೆ ಬಳಿಕವೂ ತಂಡವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಘಟನಾತ್ಮಕವಾಗಿ ಬೆಳೆದಿರುವ ಸುಳ್ಯದ ಸಹಕಾರಿ ಕ್ಷೇತ್ರವು ಬಿಜೆಪಿ-ಸಹಕಾರ ಭಾರತಿಯಲ್ಲಿ ಈಗ ವಿಘಟನೆಯ ಹಾದಿಯಲ್ಲಿ ಸಾಗಿದೆಯೇ ಎಂಬ ಬಹುದೊಡ್ಡ ಪ್ರಶ್ನೆ ಈಗ ಇದೆ.
ಡಿಸಿಸಿ ಬ್ಯಾಂಕ್ ಅಡ್ಡಮತದಾನದ ಬಳಿಕ ಸುಳ್ಯದಲ್ಲಿ ಸಹಕಾರ ಭಾರತಿ-ಬಿಜೆಪಿಯಲ್ಲಿ ದೈವಸ್ಥಾನದಿಂದ ಆರಂಭವಾಗಿ ಕಾನೂನು ಚೌಕಟ್ಟು, ಸಂಘಟನೆಯ ನಿರ್ಧಾರದವರೆಗೆ ನಡೆದ ವಿದ್ಯಮಾನಗಳು ಈಗ ಮತ್ತೊಮ್ಮೆ ಗೆಲುವು ಸಾಧಿಸುವವರೆಗೆ ತಲುಪಿದೆ. ಈ ಹಿಂದೆ ನೆಲ್ಲೂರು ಕೆಮ್ರಾಜೆಯಲ್ಲೂ ಇದೇ ರೀತಿ ನಡೆದಿತ್ತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…