ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಸುರಕ್ಷಿತವಾಗಿ ಸುಬ್ರಹ್ಮಣ್ಯ ತಲಪಿದ್ದಾರೆ. ಹೀಗಾಗಿ ಎರಡು ದಿನ ಸ್ಥಳೀಯರಿಗೂ , ಇಲಾಖೆಗಳಿಗೂ ಸಂತೋಷ್ ಕುಟುಂಬದ ಆತಂಕ ದೂರ ಮಾಡಿದ್ದ.
ಜೊತೆಯಾಗಿಯೇ ಎಲ್ಲರೂ ಬರುತ್ತಿದ್ದಾಗ ಮಳೆ ಹಿನ್ನೆಲೆಯಲ್ಲಿ ಜಾಕೆಟ್ ಬದಲಿಸುವ ವೇಳೆ ಸ್ವಲ್ಪ ಹಿಂದೆ ಉಳಿದ ಸಂತೋಷ್ ದಾರಿ ತಪ್ಪಿದ್ದರು. ಹೀಗಾಗಿ ಎರಡು ದಿನಗಳ ಬಳಿಕ ಸುಬ್ರಹ್ಮಣ್ಯ ಸೇರಿದರು. ಟ್ರಕ್ಕಿಂಗ್ ಟ್ರಿಕ್ಸ್ ಅರಿತಿರುವ ಎಲ್ಲರೂ ಕೂಡಾ ಪ್ರಾಣಿಗಳ ಭಯ ಇಲ್ಲದೇ ಇದ್ದರೆ ಹಾಗೂ ಊರಿನ ಹತ್ತಿರ ಇದ್ದರೆ ಸುರಕ್ಷಿತವಾಗಿ ಸೇರಲು ಸಾಧ್ಯವಿದೆ. ಇಲ್ಲೂ ಯುವಕ ಸಂತೋಷ್ ಅದೇ ದಾರಿಯಲ್ಲಿ ಸುರಕ್ಷಿತವಾಗಿ ಸೇರಿದ್ದಾರೆ. ಕಾಡಿನೊಳಗೆ ದಾರಿ ತಪ್ಪಿದರೆ ಮೊದಲು ನೀರಿನ ಮೂಲ ನೋಡಿದ ಬಳಿಕ ಹೊಳೆ ಹರಿದಂತೆ ಸಾಗಿದರೆ ಯಾವುದಾದರೊಂದು ಊರು ಸೇರುವುದು ನಿಶ್ಚಿತ. ಇಲ್ಲೂ ಯುವಕ ಸಂತೋಷ್ ದಾರಿ ತಪ್ಪಿದ ಬಳಿಕ ನೀರನ್ನು ಹುಡುಕಿದಾಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ನೀರಿನ ಪೈಪ್ ಲಭ್ಯವಾದ ಬಳಿಕ ಅದೇ ದಾರಿಯಲ್ಲಿ ಬಂದು ಕುಕ್ಕೆ ಸುಬ್ರಹ್ಮಣ್ಯ ತಲಪಿದ್ದಾನೆ. ಹೀಗಾಗಿ ಆತಂಕ ದೂರವಾಗಿದೆ.
ಗಿರಿಗದ್ದೆಯಿಂದ ಸುಬ್ರಹ್ಮಣ್ಯದವರೆಗೆ ಇದುವರೆಗೆ ಯಾವುದೇ ಪ್ರಾಣಿಗಳ ಭಯ ಇದ್ದಿರಲಿಲ್ಲ. ಆನೆಗಳು ಓಡಾಟ ನಡೆಸಿದರೂ ಜೀವಕ್ಕೆ ಅಪಾಯ ಮಾಡಿದ ಘಟನೆ ನಡೆದಿರಲಿಲ್ಲ. ಪ್ರತಿದಿನವೂ ಗಿರಿಗದ್ದೆಯಿಂದ ಸುಬ್ರಹ್ಮಣ್ಯದವರೆಗೆ ಜನರ ಸಂಚಾರ ಇರುತ್ತದೆ. ಹೀಗಾಗಿ ಯುವಕ ದಾರಿ ತಪ್ಪಿ ಹೋಗಿರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದರು. ಅದು ನಿಜವಾಯ್ತು.
ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕೈಜೋಡಿಸಿದ್ದರು.
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…
ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಈರುಳ್ಳಿ,…
ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮು ಆರಂಭವಾಗಿದ್ದು, ಕಡಲೆ, ಜೋಳ, ಶೇಂಗಾ…
ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮರುರಚನೆ ಮಾಡಿ, 12…