ಅಬ್ದುಲಾಪುರ ಬಾಜಾರ ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕರೆಂದು ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಮುಸಲ್ಮಾನ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಇದು ಸಾಧುವಿನ ಮೇಲಿನ ಹಲ್ಲೆಯಾಗಿರದೇ ಕೇಸರಿಯ ಮೇಲಿನ ದಾಳಿಯಾಗಿದೆ, ಹಿಂದೂ ಧರ್ಮದ ಮೇಲಿನ ಹಲ್ಲೆಯಾಗಿದೆ. ಇದರಿಂದ ಮತಾಂಧರ ಹಿಂದೂದ್ವೇಷ ಹಾಗೂ ಕೇಸರಿ ದ್ವೇಷ ಕಾಣಿಸುತ್ತದೆ. ಇಲ್ಲಿ ಆರೋಪಿಯನ್ನು ಬಂಧಿಸಿದ್ದರೂ ಆತನ ಮೇಲಿನ ಖಟ್ಲೆಯನ್ನು ತ್ವರಿತಗತಿ (ಫಾಸ್ಟ್ ಟ್ರ್ಯಾಕ್) ನ್ಯಾಯಾಲಯದಲ್ಲಿ ನಡೆಸಿ ಅವನಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ಘಟನೆಯ ಹಿಂದೆ ಕೋಮುಭಾವನೆಯನ್ನು ಕೆರಳಿಸುವ ಸಂಚು ಇಲ್ಲವಲ್ಲ ಎಂಬುದನ್ನು ಪತ್ತೆ ಹಚ್ಚಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆಯವರು ಆಗ್ರಹಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel