ಸುಳ್ಯ: ಸುಳ್ಯ ಸರಕಾರಿ ಪ್ರೌಢ ಶಾಲೆ ದುಗ್ಗಲಡ್ಕ ಇಲ್ಲಿಯ ಶಿಕ್ಷಕರಾದ ಸಂಧ್ಯಾ ಕುಮಾರ್ ಉಬರಡ್ಕ (ಸಾನು ಉಬರಡ್ಕ) ಅವರಿಗೆ ತಮ್ಮ ಸಾಹಿತ್ಯ ಸೇವೆಗಾಗಿ ಚಂದನ ಸಾಹಿತ್ಯ ವೇದಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾನವರು ಸಹೋದರರು ಸೌಹಾರ್ದ ವೇದಿಕೆಯ ವತಿಯಿಂದ ಕೊಡಮಾಡುವ “ಕಾವ್ಯ ರತ್ನ ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅ.5 ರಂದು ಕುಂಬ್ರ ಶಾರದಾ ವಿದ್ಯಾಲಯದಲ್ಲಿ ಗಾಂಧೀಜಿಯವರ 150ನೇ ಜಯಂತಿ ಹಾಗೂ ದಸರಾ ಹಬ್ಬದ ಸಂಭ್ರಮದ ಪ್ರಯುಕ್ತ ನಡೆದ ” ಸ್ನೇಹ ಸಮ್ಮಿಲನ” 2019 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಅಪರಾಧ ಪತ್ತೆ ದಳದ ರಾಜ್ಯಾಧ್ಯಕ್ಷ ಪ್ರಶಾಂತ ರೈ ಮರವಂಜ ,
ಕವಯಿತ್ರಿ ಶಾಂತಾ ಕುಂಠಿನಿ , ಚಂದನ ಸಾಹಿತ್ಯ ವೇದಿಕೆಯ ಎಚ್ ಭೀಮರಾವ್ ವಾಪ್ಠರ್ , ಸುಳ್ಯ ಅಬ್ದುಲ್ ಅಝೀಜ್ ಪುಣಚ ಮತ್ತಿತರು ಉಪಸ್ಥಿತರಿದ್ದರು.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…