ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಮಾನಸಿಕ ವಿಕಲಚೇತರೊಬ್ಬರನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎಸ್.ಐ ಸೇಸಮ್ಮ ಅವರು ಪೋಷಕರಿಗೆ ಒಪ್ಪಿಸಿ ಸಾಮಾಜಿಕ ಕಾಳಜಿ ತೋರಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ ಅವರು ಗುರುವಾರ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಸುಮಾರು 2 ಗಂಟೆಗೆ ಪುತ್ತೂರು ಬಸ್ ನಿಲ್ದಾಣದ ಬಳಿ ಮಾನಸಿಕ ವಿಕಲಚೇತನದ ವ್ಯಕ್ತಿಯೋರ್ವ ತಿರುಗಾಡುತ್ತಿರುವುದು ಕಂಡುಬಂದಿದ್ದು, ಆತನನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಆತ ನೀಡಿದ ದೂರವಾಣಿ ಸಂಖ್ಯೆಯ ಮೂಲಕ ಆತನ ಹೆತ್ತವರನ್ನು ಸಂಪರ್ಕಿಸಿ ತಮ್ಮ ವಾಹನದಲ್ಲಿ ಆತನನ್ನು ಆತನ ಮನೆಗೆ ತಲುಪಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel