ಸುಳ್ಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ತಾಲೂಕು ಘಟಕದ ವತಿಯಿಂದ ಸಾಲಮನ್ನಾ ಅನುಷ್ಟಾನ ವೈಪಲ್ಯದ ವಿರುದ್ಧ ಹೋರಾಟ ಹಮ್ಮಿಕೊಂಡಿದೆ. ಅರಂತೋಡು ಸಹಕಾರಿ ಸಂಘದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಸಮರ್ಪಕ ಉತ್ತರ ಸಿಗದ ಕಾರಣ ಸೂಕ್ತ ಭರವಸೆ ದೊರೆಯುವ ತನಕ ಅಹೋರಾತ್ರಿ ಧರಣಿ ಮುಂದುವರಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಹಮ್ಮಿಕೊಂಡ ಸಾಲಮನ್ನಾ ವಿಚಾರವಾಗಿ ಪ್ರತಿಭಟನೆ ಅರಂತೋಡು ಸಹಕಾರಿ ಸಂಘ ಎದುರು ಪ್ರತಿಭಟನೆ ನಡೆಯುತ್ತಿದೆ. ಆದರೆ ವಲಯ ಸಹಕಾರಿ ಸೂಪರ್ವೈಸರ್ ಬಾಲಕೃಷ್ಣ ಅವರು ಕೊಟ್ಟ ಭರವಸೆ ಗೆ ರೈತರು ಒಪ್ಪದೇ ಜಿಲ್ಲಾ ರೆಜಿಸ್ಟ್ರಾರ್ ಅವರೇ ಬಂದು ಸೂಕ್ತ ಭರವಸೆ ನೀಡುವ ತನಕ ಅಹೋರಾತ್ರಿ ಧರಣಿ ಮಾಡುವುದೆಂದು ತೀರ್ಮಾನಿಸಿದ್ದಾರೆ .
ಪ್ರತಿಭಟನೆಯಲ್ಲಿ ರೈತ ಸಂಘ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಅವರ ಮುಂದಾಳತ್ವ ವಹಿಸಿದ್ದಾರೆ .ರೈತಸಂಘ ಸುಳ್ಯ ತಾಲುಕ್ ಘಟಕದ ಅಧ್ಯಕ್ಷ ಲೊಲಜಾಕ್ಷ ಭೂತಕಲ್ಲು ,ಪ್ರಧಾನ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ,ಜಿಲ್ಲಾ ಕಾರ್ಯದರ್ಶಿ ದಿವಾಕರ ಪೈ ಮಜಿಗುಂಡಿ ,ಖಜಾಂಜಿ ದೇವಪ್ಪ ಕುಂಡಲಪಾಡಿ ,ಅರಂತೋಡು ವಲಯ ಅದ್ಯಕ್ಷ ತೀರ್ಥರಾಮ ಉಳುವಾರು ,ಕಾರ್ಯದರ್ಶಿ ಮೋಹನ್ ಅಡ್ತಲೆ ಮತ್ತು ಅರಂತೋಡು ,ಅಲೆಟ್ಟಿ ,ಉಬರಡ್ಕ,ಮಡಪ್ಪಾಡಿ ಜಾಲ್ಸೂರ್ ,ಅಜ್ಜಾವರ ಮುಂತಾದ ಗ್ರಾಮಗಳ ರೈತರು ಭಾಗವಹಿಸಿದ್ದಾರೆ.
ಈಗಿನಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದ್ದು, ಮಾರ್ಚ್ 11 ಹಾಗೂ 12ರಂದು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದಾ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಾರುಕಟ್ಟೆಯಲ್ಲಿ ಅಡಿಕೆ ಇರುವ ಕೊರತೆ ಬಗ್ಗೆ ವಿದೇಶದಲ್ಲೂ ಚರ್ಚೆ ಆರಂಭವಾಗಿದೆ. ಹೀಗಾಗಿ ಭಾರತದ…
ಬಿಸಿಯಾದ ಅನ್ನದ ಜೊತೆ, ದೋಸೆ ಜೊತೆ ಹಲಸಿನಕಾಯಿ ರಚ್ಚೆಯ ಚಟ್ನಿ ಬಲು ಸೂಪರ್.
ಲೋಕ ಅದಾಲತ್‌ನಲ್ಲಿ ಐದು ಜಿಲ್ಲೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಚಿತ್ರದುರ್ಗದಲ್ಲಿ…
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಒಟ್ಟು 6 ಮರಿಗಳಿಗೆ ಜನ್ಮ…