ಸುಳ್ಯ: ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡಿದೆ. ಆದರೆ ಬಂದದ್ದೆಷ್ಟು, ಸಿಕ್ಕಿದ್ದೆಷ್ಟು ? , ಯಾರಿಗೆ ಎಷ್ಟು ಸಿಕ್ಕಿದೆ, ಹೇಗೆ ಸಿಕ್ಕಿದೆ..? ಇದೆಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರವಿಲ್ಲ. ಕೆಡಿಪಿ ಸಭೆಯಲ್ಲೂ ಹಾಗೆಯೇ ಆಯಿತು. ಕೊನೆಗೆ ಯಾವ ರೈತರಿಗೆ ಸಾಲ ಮನ್ನಾ ಹಣ ಪಾವತಿಯಾಗಿದೆ ಯಾರದೆಲ್ಲ ಉಳಿದಿದೆ ಎಂಬುದರ ಬಗ್ಗೆ ಗ್ರಾಮವಾರು ಪಟ್ಟಿ ಸಲ್ಲಿಸುವಂತೆ ಶಾಸಕ ಅಂಗಾರ ಸೂಚಿಸಿದರು.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸುಳ್ಯ ತಾಲೂಕು ಪ್ರಗತಿ ಪರಿಶೀಲನಾ ಸಭೆಯು ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಸರಕಾರದ ಸಾಲಮನ್ನಾ ಒಂದು ಲಕ್ಷ ರೂ ರೈತರಿಗೆ ಸಲ್ಲಿಕೆಯಾಗಿವರುವ ಬಗ್ಗೆ ಮತ್ತೆ ಗೊಂದಲ ಸೃಷ್ಠಿಯಾಗಿದೆ. ವಾಣಿಜ್ಯ ಬ್ಯಾಂಕ್‍ಗಳ ಮೂಲಕ 1083 ಮಂದಿಗೆ ಮತ್ತು ಸಹಕಾರಿ ಸಂಘಗಳ ಮೂಲಕ 14,114 ಮಂದಿಯ ಖಾತೆಗೆ ನೇರವಾಗಿ ಒಂದು ಲಕ್ಷ ರೂ ಪಾವತಿಯಾಗಿದೆ ಎಂದು ಎರಡು ದಿನಗಳ ಹಿಂದೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ನೇತೃತ್ವದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿಯೂ ಐವನ್ ಡಿಸೋಜ ಇದನ್ನೇ ಪತ್ರಕರ್ತರಿಗೆ ಹೇಳಿದ್ದರು.
ಗುರುವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ಸಹಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆಯಲ್ಲಿ ಕೊಟ್ಟ ಮಾಹಿತಿ ಇದಕ್ಕಿಂದ ಭಿನ್ನವಾಗಿತ್ತು. ಕರ್ನಾಟಕ ಸರಕಾರದ ಸಾಲಮನ್ನಾ ಯೋಜನೆಯಡಿ ಒಂದು ಲಕ್ಷ ಸಾಲ ಮನ್ನಾ ಪಡೆಯಲು 14,114 ಫಲಾನುಭವಿಗಳಿದ್ದು 118.12 ಕೋಟಿ ಬೇಡಿಕೆ ಇರುತ್ತದೆ. ಈ ಪೈಕಿ 5,373 ರೈತರಿಗೆ 37.92 ಕೋಟಿ ರೂ ಬಿಡುಗಡೆ ಆಗಿರುತ್ತದೆ. 8,771 ರೈತರಿಗೆ 80.20 ಕೋಟಿ ಬಿಡುಗಡೆಗೆ ಬಾಕಿ ಇದೆ ಎಂದು ಸಹಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಇದು ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಯಾವ ರೈತರಿಗೆ ಸಾಲ ಮನ್ನಾ ಹಣ ಪಾವತಿಯಾಗಿದೆ ಯಾರದೆಲ್ಲ ಉಳಿದಿದೆ ಎಂಬುದರ ಬಗ್ಗೆ ಗ್ರಾಮವಾರು ಪಟ್ಟಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…