ಮಡಿಕೇರಿ : ಕೊಟ್ಟಿಗೆಯೊಳಗಿದ್ದ ಆಡು ಮತ್ತು ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆಯೊಂದು ಭಕ್ಷಿಸಿರುವ ಘಟನೆ ಕುಶಾಲನಗರ ಸಮೀಪದ ಸಿದ್ಧಲಿಂಗಪುರದಲ್ಲಿ ನಡೆದಿದೆ.
ಸಿದ್ಧಲಿಂಗಪುರ ಮತ್ತು ಅಳಿಲುಗುಪ್ಪೆ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಅಳಿಲುಗುಪ್ಪೆಯ ಲೋಕೇಶ್ ಎಂಬವರ ಮನೆಯ ಮುಂದೆ ರಾತ್ರಿ ಕಟ್ಟಿದ್ದ ನಾಯಿಯನ್ನು ಚಿರತೆ ಭಕ್ಷಿಸಿದೆ.
ಕೊಡಗಿನ ಗಡಿಭಾಗದ ಮರಿಯಾನಗರಕ್ಕೆ ಹೊಂದಿಕೊಂಡಂತಿರುವ ಚಿಮ್ಮಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಆಡನ್ನು ಎಳೆದ ತಿಂದಿದೆ. ಚಿರತೆಯನ್ನು ಪ್ರತ್ಯಕ್ಷವಾಗಿ ನೋಡಿರುವ ತೋಟದ ಕಾರ್ಮಿಕರು ಕಾಡಿನಂಚಿನ ಜಮೀನುಗಳಲ್ಲಿ ಕೆಲಸ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ.
ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಈ ಪ್ರದೇಶದಲ್ಲಿ ಈಗಾಗಲೇ ಹಾಸನದ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನ್‍ನ್ನು ತಂದು ಇರಿಸಿದ್ದಾರೆಯಾದರು ಚಿರತೆ ತಮ್ಮ ಮೇಲೆರಗಬಹುದು ಎನ್ನುವ ಭೀತಿಯಲ್ಲೇ ಗ್ರಾಮಸ್ಥರು ದಿನದೂಡುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel