ಸುಳ್ಯ: ಸುನಾದ ಕಲಾ ಶಾಲೆಯ ಮುಖ್ಯಸ್ಥ ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ವಿದುಷಿ ಶಿಲ್ಪಾ ಸಿ ಎಚ್ ನಿರ್ದೇಶನದಲ್ಲಿ ಸುನಾದ ಸಂಗೀತ ಕಲಾ ಶಾಲೆ ರಾಮಕುಂಜ ಹಾಗು ಇಂದ್ರಪ್ರಸ್ಥ ಶಾಖೆಯ ಸಂಗೀತೋತ್ಸವ ಸಂಪನ್ನಗೊಂಡಿತು.
Advertisement
ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾರ್ಯದಶಿ ರಾಧಾಕೃಷ್ಣ ಕೆ ಎಸ್, ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಭಟ್ ಉಪಸ್ಥಿತರಿದ್ದರು.
Advertisement
ಬಳಿಕ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ ಖ್ಯಾತ ಕಲಾವಿದರಾದ ವಿದ್ವಾನ್ ಎನ್. ಶ್ರೀನಾಥ್ ಮೈಸೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್‌ನಲ್ಲಿ ವಿದ್ವಾನ್ ವೇಣುಗೋಪಾಲ್ ಶ್ಯಾನುಭೋಗ್, ಮೃದ೦ಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಮೋರ್ಸಿಂಗ್‌ನಲ್ಲಿ ವಿದ್ವಾನ್ ವಿ ಎಸ್ ರಮೇಶ್ ಮೈಸೂರು ಇವರು ಸಾಥ್ ನೀಡಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement