ಸುಳ್ಯ: ಭಕ್ತಿರಸದ ಮೂಲಕ ನಮ್ಮೊಳಗಿರುವ ಅರಿಷಡ್ವರ್ಗಗಳನ್ನು ಜಯಿಸಿ ಆ ಭಗವಂತನಲ್ಲಿ ಶರಣಾಗತಿ ಹೊಂದಲು ಇರುವ ಅತಿ ಸರಳ ಮಾರ್ಗ ಸಂಗೀತ. ಸಮಾಜದ ಉನ್ನತಿಗೆ, ಸದ್ಭಾವನೆ ಮತ್ತು ಸಾಮರಸ್ಯದಲ್ಲಿ ಬದುಕಲು ಸಂಗೀತ ವಿದ್ಯೆ ಅನಿವಾರ್ಯ ಎಂದು ಖ್ಯಾತ ಮೃದಂಗ ವಿದ್ವಾನ್ ಸುನಾದ ಕಲಾ ಶಾಲಾ ನಿರ್ದೇಶಕ ಕಾಂಚನ ಎ ಈಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವಾರ್ಷಿಕ ಸಂಗೀತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ತನ್ನ ಮೂಲ ಉದ್ದೇಶವನ್ನು ಮರೆತು ಸಂಗೀತವನ್ನು ಅರ್ಜಿಸುತ್ತಿರುವುದು ಅನುಭವಕ್ಕೆ ಬರುತ್ತಿದೆ. ಸಂಗೀತವನ್ನು ಎಲ್ಲರೂ ಅರ್ಥೈಸಿ ಅನುಸರಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಜಯಶ್ರೀ ಈಶ್ವರ ಭಟ್, ನಾರಾಯಣ ಕೇಳತ್ತಾಯ, ಪ್ರಕಾಶ್ ಹಾಸನಡ್ಕ, ಪೂರ್ಣಿಮಾ, ವಿದುಷಿ ವಾಣಿ ಪ್ರಸಾದ್, ಸೌಜನ್ಯ ಪ್ರಶಾಂತ್, ವಿದುಷಿ ಶಿಲ್ಪಾ, ಮಹಾಬಲ ಬಿರ್ಮುಕಜೆ, ವಿದ್ವಾನ್ ಶ್ಯಾಮ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸುನಾದ ಸಂಗೀತ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…