ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥದ ಅದ್ದೂರಿ ಮೆರವಣಿಗೆ ಮೂಲಕ ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ತಲುಪಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾವಿರಾರು ಭಕ್ತಾದಿಗಳು ಮೆರವಣಿಗೆಯ ಮೂಲಕ ಸ್ವಾಗತಿಸಿದರು. ರಥ ಕುಕ್ಕೆ ಸುಬ್ರಹ್ಮಣ್ಯ ತಲುಪುತ್ತಿದ್ದಂತೆಯೇ ಮಳೆಯ ಸಿಂಚನವೂ ಆಗಿರುವುದು ಭಕ್ತರ ಸಂತಸಕ್ಕೆ ಕಾರಣವಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ರೈ ಕಡಬ ಅವರು ದೇಣಿಗೆ ರೂಪದಲ್ಲಿ ಕೊಡಮಾಡಿದ ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥವು ಕೋಟೇಶ್ವರದಿಂದ ಸೆ.30 ರಂದು ಹೊರಟು ಉಡುಪಿ, ಮಂಗಳೂರು ಮೂಲಕ ಉಪ್ಪಿನಂಗಡಿ ಮಾರ್ಗವಾಗಿ ಆಗಮಿಸಿ ಮಂಗಳವಾರ ರಾತ್ರಿ ಬಲ್ಯದಲ್ಲಿ ತಂಗಿತ್ತು. ಬುಧವಾರ ಬೆಳಗ್ಗೆ ಬಲ್ಯದಿಂದ ಹೊರಟ ರಥವು ಹೊಸಮಠದ ಮೂಲಕ ಕಡಬ ತಲುಪಿದಾಗ ಅದ್ದೂರಿ ಮೆರವಣಿಗೆ ನಡೆಯಿತು. ಕಡಬದಲ್ಲಿ ಸಾವಿರಾರು ಮಂದಿ ನೂತನ ರಥವನ್ನು ಅದ್ದೂರಿಯಿಂದ ಸ್ವಾಗತಿಸಿದರು.
ಬಳಿಕ ವಾಹನ ಮೆರವಣಿಗೆ ಮೂಲಕ ಹೊರಟ ರಥಕ್ಕೆ ಮರ್ಧಾಳ, ಬಿಳಿನೆಲೆ , ಕೈಕಂಬಗಳಲ್ಲಿ ಸ್ವಾಗತ ನಡೆಯಿತು. ಕೈಕಂಬದ ಬಳಿಕ ಸಾವಿರಾರು ಭಕ್ತಾದಿಗಳೂ ಜೊತೆಯಾಗಿ ಕುಮಾರಧಾರಾ ತಲುಪಿದ ಬಳಿಕ ಭಕ್ತಾದಿಗಳ ಹರ್ಷ ಮುಗಿಲು ಮುಟ್ಟಿತು. ಕುಮಾರಧಾರಾದಲ್ಲಿ ಸುಬ್ರಹ್ಮಣ್ಯದ ಆನೆ ಯಶಸ್ವಿ ಸ್ವಾಗತಿಸಿ ನಂತರ ಭಕ್ತಾದಿಗಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ನೂತನ ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋ, ಭಜನೆ ಮೊದಲಾದವುಗಳಿಂದ ಮೆರವಣಿಗೆ ನಡೆಯಿತು. ರಥಬೀದಿ ತಲುಪಿದ ಬಳಿಕ ರಥಕ್ಕೆ ವಿಶೇಷವಾದ ಪೂಜೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸದಸ್ಯರುಗಳು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ರಥದ ದಾನಿ ಅಜಿತ್ ಶೆಟ್ಟಿ ಕಡಬ, ದೇವಸ್ಥಾನದ ಅಧಿಕಾರಿ ಚಂದ್ರಶೇಖರ ಪೇರಾಲು, ಪ್ರಮುಖರಾದ ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಮುತ್ತಪ್ಪ ರೈ ಅವರ ಸಹೋದರ ಕರುಣಾಕರ ರೈ ಮೊದಲಾದವರು ಉಪಸ್ಥಿತರಿದ್ದರು.
ನೂತನ ರಥವು ಕುಕ್ಕೆ ಸುಬ್ರಹ್ಮಣ್ಯ ತಲುಪುತ್ತಿದ್ದಂತೆಯೇ ಗುಡಗು ಸಹಿತ ಮಳೆಯಾಯಿತು.ಹೀಗಾಗಿ ಆಗಮಿಸಿದ ಭಕ್ತರಿಗೆಲ್ಲಾ ಸಂತಸ ಇಮ್ಮಡಿಯಾಯಿತು. ಸುಬ್ರಹ್ಮಣ್ಯ ದೇವರು ಸುಪ್ರೀತರಾಗಿ ಮಳೆಯ ಸಿಂಚನವಾಯಿತು ಎಂದು ಸಂತಸ ಪಟ್ಟರು. ಕುಮಾರಧಾರಾ ಬಳಿ ರಥ ತಲುಪುತ್ತಿದ್ದಂತೆಯೇ ತುಂತುರು ಮಳೆ ಆರಂಭವಾಗಿ ನಂತರ ಗುಡುಗು ಸಹಿತ ಮಳೆಯಾಗಿದೆ.
ನೂತನ ಬ್ರಹ್ಮರಥ ಆಗಮನದ ಸಂದರ್ಭ ಎಲ್ಲೆಡೆ ಸೌಹಾರ್ದತೆಗೂ ಕಾರಣವಾಯಿತು. ಅನ್ಯಧರ್ಮೀಯರು ಬ್ಯಾನರ್ ಮೂಲಕ ಶುಭಾಶಯ ಕೋರಿದ್ದರೆ ಇನ್ನೂ ಕೆಲವು ಕಡೆ ಸಿಹಿ, ಪಾನೀಯ ಹಂಚುವ ಮೂಲಕ ಮೆರವಣಿಗೆಯ ಕಾರ್ಯದಲ್ಲಿ ಭಾಗಿಯಾದರು. ಈ ಮೂಲಕ ಕುಕ್ಕೆ ಸುಬ್ರಹ್ಮನ್ಯ ದೇವರ ನೂತನ ರಥದ ಮೆರವಣಿಗೆ ಸೌಹಾರ್ದತೆಗೂ ಕಾರಣವಾಯಿತು. ಕಡಬದ ಬಳಿಕ ಅಲ್ಲಲ್ಲಿ ಭಕ್ತಾದಿಗಳು ಪಾನೀಯ ವಿತರಿಸಿದರು.
ರಥವು ಕುಕ್ಕೆ ಸುಬ್ರಹ್ಮಣ್ಯ ತಲಪುತ್ತಿದ್ದಂತೆಯೇ ಕಾಶಿಕಟ್ಟೆ ಬಳಿ ಗಣಪತಿ ಗುಡಿಯಲ್ಲಿ ಆರತಿ ಬೆಳಗಿದ ಬಳಿಕ ರಥ ಹೊತ್ತಿದ್ದ ವಾಹನವು ಕಾಶಿಕಟ್ಟೆ ಗಣಪತಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹೊಡೆದುಕೊಂಡು ಚಲಿಸಿತು. ಬ್ರಹ್ಮರಥವು ಪ್ರತೀ ವರ್ಷ ರಾಜಬೀದಿಯವರೆಗೆ ಮಾತ್ರಾ ಬರುತ್ತದೆ. ಹೀಗಾಗಿ ನೂತನ ರಥದ ಆಗಮನದ ಸಂದರ್ಭದಲ್ಲಿ ಕಾಶಿಕಟ್ಟೆ ಗಣಪತಿ ಗುಡಿಗೆ ಪ್ರದಕ್ಷಣೆಯ ದಾರಿಯಲ್ಲಿಯೇ ಸಾಗಿತು. ರಥಬೀದಿಯಲ್ಲಿ ಈ ಹಿಂದಿನ ಬ್ರಹ್ಮರಥಕ್ಕೆ ಅಲಂಕಾರ ಮಾಡಲಾಗಿತ್ತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…