ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಸಿಬ್ಬಂದಿ ದೇವರಾಜ್ ಎಂಬವರ ಮೇಲೆ ಚಪ್ಪಲಿ ವಿಚಾರದಲ್ಲಿ ಭಾಸ್ಕರ ಬೆಂಡೋಡಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಭಾಸ್ಕರ ಬೆಂಡೋಡಿ ಅವರು ಕೂಡಾ ಪ್ರತಿದೂರು ನೀಡಿದ್ದಾರೆ.
ಸುಬ್ರಹ್ಮಣ್ಯ ದೇವಸ್ಥಾನದ ಹೊರಭಾಗದಲ್ಲಿ ಎಲ್ಲೆಂದರಲ್ಲಿ ಚಪ್ಪಲಿ ಬಿಟ್ಟು ಹೋದರೆ ಚಪ್ಪಲಿಮ ಸ್ಟ್ಯಾಂಡ್ ಸಿಬಂದಿಗಳು ಚಪ್ಪಲಿಗಳನ್ನು ಸ್ಟ್ಯಾಂಡ್ ಬಳಿ ರಾಶಿ ಹಾಕುತ್ತಾರೆ. ಅದೇ ರೀತಿ ನ.12 ರಂದು ಬ್ರಹ್ಮರಥದ ಆಸುಪಾಸಿನಲ್ಲಿ ಬಿಟ್ಟುಹೋಗಿದ್ದ ಚಪ್ಪಲಿಗಳನ್ನು ಸ್ಯ್ಟಾಂಡ್ ಸಿಬ್ಬಂದಿಗಳು ಚಪ್ಪಲಿ ಸ್ಯ್ಟಾಂಡ್ ಬಳಿ ರಾಶಿ ಹಾಕಿದ್ದರು. ಇದೇ ನೆಪದಲ್ಲಿ ಭಾಸ್ಕರ ಬೆಂಡೋಡಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೇವರಾಜ್ ಅವರು ಕಡಬ ಆಸ್ಪತ್ರೆಗೆ ದಾಖಲಾಗಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ಸಂದರ್ಭ ಚಪ್ಪಲಿ ಸ್ಯ್ಟಾಂಡ್ ನ ಮೂರು ಸಿಬ್ಬಂದಿಗಳು ಸೇರಿ ಚಪ್ಪಲಿ ಸ್ಯ್ಟಾಂಡ್ ನಲ್ಲಿ ಇಟ್ಟ ಚಪ್ಪಲಿ ವಾಪಾಸು ಕೊಟ್ಟಿಲ್ಲ, ಇದನ್ನು ಪ್ರಶ್ನಿಸಿದಕ್ಕಾಗಿ ಹಲ್ಲೆ ನಡೆಸಿರುವುದಾಗಿ ಪ್ರತಿದೂರನ್ನು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿದ್ದಾರೆ.