ಸುಬ್ರಹ್ಮಣ್ಯ: ಗದ್ದೆಯಲ್ಲಿ ನಾಟಿಗಾಗಿ ಸುಬ್ರಹ್ಮಣ್ಯದ ವಿದ್ಯಾರ್ಥಿಗಳಿ ಗದ್ದೆಗೆ ಇಳಿದರು. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಹಾಗೂ ಬೇಸಾಯ ಪದ್ಧತಿ ಕುರಿತು ಮಾಹಿತಿ ಕಾರ್ಯಕ್ರಮ ನಡೆದರೆ, ಸುಬ್ರಹ್ಮಣ್ಯ ಎಸ್‍ಎಸ್‍ಪಿಯು ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ಭತ್ತದ ನಾಟಿಗಾಗಿ ಗದ್ದೆಗೆ ಇಳಿದಿದ್ದರು.
ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಹಾಗೂ ಬೇಸಾಯ ಪದ್ಧತಿ ಕುರಿತು ಮಾಹಿತಿ ಕಾರ್ಯಕ್ರಮವು ನಡೆಯಿತು.
ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ರಾಮಣ್ಣ ಮಲೆಕುಡಿಯ ಅವರ ಭತ್ತದ ಗದ್ದೆಯಲ್ಲಿ ಮಕ್ಕಳು ಭತ್ತ ಬೇಸಾಯ ಕುರಿತು ನಾಟಿ ಮಾಡುವ ಮೂಲಕ ತಿಳಿದುಕೊಂಡರು. ಅಕ್ಕಿ ಬೆಳೆಯೋದು ಹೇಗೆ ? ನಮ್ಮ ಹಿರಿಯ ರೈತರು ಏನೆಲ್ಲ ಕಷ್ಟ ಪಡುತ್ತಿದ್ದರು. ಮೊದಲಾದ ವಿಷಯಗಳ ಕುರಿತು ಶಾಲಾ ಶಿಕ್ಷಕರು ತಿಳಿಸಿಕೊಟ್ಟರು. ಮಕ್ಕಳು ಕೆಸರು ತುಂಬಿದ ಗದ್ದೆಯಲ್ಲಿ ಭತ್ತದ ತೆನೆಗಳನ್ನು ಹಿಡಿದು ನಾಟಿ ಮಾಡಿದರು. ಕೆಸೆರಿನಲ್ಲಿ ಮಿಂದೆದ್ದು ಸಂಭ್ರಮ ಪಟ್ಟರು.
ಈ ಸಂದರ್ಭ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಚಂದ್ರಶೇಖರ್ ನಾಯರ್, ಮುಖ್ಯ ಶಿಕ್ಷಕಿ ವಿದ್ಯಾರತ್ನ, ಸಮಾಜ ಸೇವಕ ರವಿಕಕ್ಕೆಪದವು, ಶಿಕ್ಷಕರಾದ ದಿನಕರ, ಕಾರ್ತಿಕೆ, ಸುವರ್ಣ, ಯೋಗನಾಥ್, ಜಮೀನು ಒಡೆಯ ರಾಮಣ್ಣ ಪರ್ವತಮುಖಿ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಎಸ್‍ಎಸ್‍ಪಿಯು ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ಭತ್ತದ ನಾಟಿಗಾಗಿ ಗದ್ದೆಗೆ ಇಳಿದಿದ್ದರು. ಪರ್ವತಮುಖಿ ರಾಮಣ್ಣ ಮಲೆಕುಡಿಯ ಅವರ ಭತ್ತದ ಗದ್ದೆಯಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳು ಎನ್ ಎಸ್ ಎಸ್ ಘಟಕದ ಮುಖ್ಯಸ್ಥರೊಂದಿಗೆ ತೆರಳಿದ ವಿದ್ಯಾರ್ಥಿಗಳು ಭತ್ತದ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಹದಗೊಳಿಸಿದ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನೆಟ್ಟರು. ಭತ್ತದ ಬೆಳೆ ಕ್ಲಿಷ್ಟ ಎಂದು ಕೈ ಬಿಟ್ಟಿರುವ ರೈತರು ನಾಚುವಂತೆ ನಾಟಿ ಮಾಡಿದರು.
ವಿವಿಧ ಗುಂಪುಗಳಾಗಿ ಮಾಡಿಕೊಂಡು ಸಸಿ ಮಡಿಗಳಿಗೆ ಇಳಿದ ಶಿಕ್ಷಕರು, ಮಕ್ಕಳು ಸಸಿಗಳನ್ನು ನೆಟ್ಟು ಮಂದಹಾಸ ಬೀರಿದರು. ಮಕ್ಕಳು ಕೃಷಿ ಮಾಡುವುದನ್ನು ರಸ್ತೆ ಬದಿ ತೆರಳುತ್ತಿದ್ದ ಸಾರ್ವಜನಿಕರು, ಪ್ರಯಾಣಿಕರು ಕುತೂಹಲದಿಂದ ಬಂದು ವೀಕ್ಷಿಸಿದರು. ಕಾಲೇಜು ಪ್ರಾಂಶುಪಾಲೆ ಸಾವಿತ್ರಿ ಕೆ, ಘಟಕ ಮುಖ್ಯಸ್ಥ ಉಪನ್ಯಾಸಕ ಸೋಮಶೇಖರ, ರತ್ನಾಕರ ಎಸ್ , ಕೃಷಿ ಜಮೀನಿನ ಒಡೆಯ ರಾಮಣ್ಣ, ಮೋನಪ್ಪ ಮಾನಾಡು ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…