ಸುಬ್ರಹ್ಮಣ್ಯ: ಶ್ರೀ ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ ಇದರ ವತಿಯಿಂದ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಗಾರವು ಮೇ.2ರಿಂದ 5ರ ತನಕ ಆದಿಸುಬ್ರಹ್ಮಣ್ಯದಲ್ಲಿ ನಡೆಯಲಿದೆ.
ಉದ್ಯಮಿ ಹರೀಶ್ ಕಾಮತ್ ಕಾರ್ಯಗಾರ ಉದ್ಘಾಟಿಸುವರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಯಾಗಿ ವಿದುಷಿ ಕಾಂಚನ ಎಸ್ ಶ್ರುತಿರಂಜನಿ ಉಪಸ್ಥಿತರಿರುವರು ಎಂದು ಶ್ರೀ ಸರಸ್ವತೀ ಸಂಗೀತ ಶಾಲೆ ಶಿಕ್ಷಕಿ ವಿದ್ಯಾಗೋವಿಂದ ತಿಳಿಸಿದ್ದಾರೆ.
ಮೇ.5ರಂದು ನಡೆಯುವ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯಲಿದೆ ಮೃದಂಗದಲ್ಲಿ ಆಚಿಂತ್ಯಕೃಷ್ಣ ಪುತ್ತೂರು, ಸುಶಾಂತ್.ಜಿ ಸಂವೀತ್ ಬೆಂಗಳೂರು ವಯೋಲಿನ್‍ನಲ್ಲಿ ಅಂಕಿತಾ, ಅಖಿಲಾ ಭಟ್ ಸಹಕರಿಸುವರು.
ಮೇ 5ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸುವರು. ಅತಿಥಿಗಳಾಗಿ ಶ್ರೀ ವೇದವ್ಯಾಸ ರಾಮಕುಂಜ ಇಲ್ಲಿಯ ಡಾ.ಎಚ್.ಆರ್ ಶಿವಕುಮಾರ್ ಹೊಸೋಳಿಕೆ ಉಪಸ್ಥಿತರಿರುವರು. ವಿದುಷಿ ಕಾಂಚನ ಶ್ರುತಿ ರಂಜಿನಿ ವೇದಿಕೆಯಲ್ಲಿರುವರು.
ಸಂಜೆ ಬೆಂಗಳೂರಿನ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ದ್ವಂದ್ವ ಗಾಯನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…