ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿ ಆನೆ ವಾಸ್ತವ್ಯವಿರುವ ಇಂಜಾಡಿ ಶೆಡ್‍ನಲ್ಲಿ ವಿವಿಧ ಪೂಜೆ, ಹೋಮ, ಹವನಗಳು ನಡೆದವು.
Advertisement
ದೇವಸ್ಥಾನದ ಆನೆ ಯಶಸ್ವಿ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿತ್ತು. ಈ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಇತ್ತೀಚೆಗೆ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆ ಚಿಂತನೆ ಇರಿಸಿತ್ತು. ಈ ವೇಳೆ ದೈವಜ್ಞರು ಶೆಡ್‍ನ ವಾಸ್ತು ಸಹಿತ ಕೆಲ ದೋಷಗಳು ಕಂಡು ಬಂದ ಕುರಿತು ತಿಳಿಸಿ ದೋಷ ಪರಿಹಾರಕ್ಕೆ ಕೆಲ ಪರಿಹಾರ ಕ್ರಮಗಳನ್ನು ಸೂಚಿಸಿದ್ದರು. ಅದರಂತೆ ಶೆಡ್‍ನಲ್ಲಿ ವಾಸ್ತು ಹೋಮ, ವಾಸ್ತುಬಲಿ, ಸುದರ್ಶನ ಹೋಮ, ಮೃತ್ಯುಂಜಯ ಹೋಮ ಇತ್ಯಾದಿಗಳನ್ನು ನಡೆಸಲಾಯಿತು. ದೇವಸ್ಥಾನ ಅರ್ಚಕರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಮಿತಿ ಸದಸ್ಯರು, ದೇಗುಲದ ಅಧಿಕಾರಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು. ಆನೆಯು ಚೇತರಿಸಿಕೊಳ್ಳುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement