ಸುಬ್ರಹ್ಮಣ್ಯ : ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಒಡಿಯೂರು ಶ್ರೀಗಳ ಜಯಂತ್ಯುತ್ಸವ ಗ್ರಾಮೋತ್ಸವದ ಅಂಗವಾಗಿ ಗ್ರಾಮ ಸ್ವಚ್ಚ ಕಾರ್ಯಕ್ರಮ ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ನಡೆಯಿತು.
ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಮಾರಧಾರ ಸ್ನಾನಘಟ್ಟ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಘಟಕದ ಕಾರ್ಯಕರ್ತರು ನಡೆಸಿದರು. ಸ್ನಾನ ಘಟ್ಟ ಬಳಿ ಭಕ್ತರು ಬಳಸಿ ಬಿಸಾಕಿದ ಬಟ್ಟೆ, ಸಾಬೂನು ಪ್ಯಾಕೇಟ್, ಪ್ಲಾಸ್ಟಿಕ್ ಬಾಟಲಿ, ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಶುಚಿಗೊಳಿಸಿದರು. ಬಳಿಕ ಕುಮಾರಧಾರ ಪರಿಸರದಲ್ಲಿ ಸಹಿತ ಸ್ವಚ್ಛತೆ ಕಾರ್ಯ ನಡೆಸಿದರು. ಈ ಸಂದರ್ಭ ಸುಳ್ಯ ತಾಲೂಕು ವಿಸ್ತರಣಾ ಅಧಿಕಾರಿ ಮುರಳೀಧರ ಎರ್ಮಾಯಿಲ್, ಪಂಜ ವಲಯ ಸಂಯೋಜಕಿ ಅನಿತಾ, ಸುಬ್ರಹ್ಮಣ್ಯ ಗ್ರಾಮ ಸೇವಾದೀಕ್ಷಿತೆ ಲತಾ ಸಹಿತ ಅನೇಕ ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಒಡಿಯೂರು ಗ್ರಾಮ ವಿಕಾಸ ಸುಬ್ರಹ್ಮಣ್ಯ ಘಟಕದ ವತಿಯಿಂದ ಗ್ರಾಮ ಸ್ವಚ್ಛತೆ ಕಾರ್ಯಕ್ರಮ ಸುಬ್ರಹ್ಮಣ್ಯದಲ್ಲಿ ನಡೆಯಿತು.