ಸುಬ್ರಹ್ಮಣ್ಯ: ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪ್ರತಿವರ್ಷವೂ ನಡೆಯುವ ಅಹಿತಕರ ಘಟನೆಯಿಂದ ವಿದ್ಯಾರ್ಥಿ ಗಳಲ್ಲಿ ಪೋಷಕರಲ್ಲಿ ಮತ್ತು ಕಾಲೇಜಿನ ಉಪನ್ಯಾಸಕ ವೃಂದದಲ್ಲಿ ಆತಂಕ ಆವರಿಸಿದೆ. ಜೊತೆಗೆ ಕಾಲೇಜಿನ ಹೆಸರಿಗೆ ಧಕ್ಕೆಯಾಗುತ್ತಿರುವುದರಿಂದ ಇದಕ್ಕೆ ಸೂಕ್ತವಾದ ಪರಿಹಾರ ಕ್ರಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರಿಗೆ ಮನವಿ ಮಾಡಲಾಯಿತು. ಈ ಸಂದರ್ಭ ಕಾಲೇಜ್ ನಲ್ಲಿ ಸ್ಥಳ ಪ್ರಶ್ನೆಯನ್ನು ಮಾಡಿ ಸೂಕ್ತ ವಾದ ಪರಿಹಾರ ಕ್ರಮವನ್ನು ನೆರವೇರಿಸುವಂತೆ ಮನವಿ ಮಾಡಲಾಯಿತು.
Advertisement
ಈ ಸಂದರ್ಭ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಇದರ ನಗರ ಕಾರ್ಯದರ್ಶಿ ಹಿತೇಶ್ ಕಟ್ರಮನೆ, ಕಾರ್ಯಕರ್ತ ಮೋಕ್ಷಿತ್ ಕುಕ್ಕಪ್ಪಮನೆ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement