ಸುಬ್ರಹ್ಮಣ್ಯ: ಜೆಸಿಐ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಸುಬ್ರಹ್ಮಣ್ಯದಲ್ಲಿ ನಡೆಯಿತು. ಜೆಸಿಐ ಭಾರತದ ಜೆಸಿಐ ವಲಯ 15 ಅಧ್ಯಕ್ಷ ಜೇಸೀ ಅಶೋಕ್ ಚೂಂತರ್ ಉದ್ಘಾಟಿಸಿದರು.
ಬಳಿಕ ಸುಬ್ರಹ್ಮಣ್ಯ ಸ್ವಚ್ಛತಾ ಕಾರ್ಯಕ್ರಮ ನಡೆಯಿತು, ಜೆಸಿಐ ಸಪ್ತಾಹದ ವಿವಿಧ ಸಮಾಜ ಮುಖಿ ಕಾರ್ಯಕ್ರಮ ಹಾಗೂ ತರಬೇತಿ ನಡೆಯಿತು. ದಂತ ವೈದ್ಯರಾದ ಡಾ |ಸಿದ್ದಲಿಂಗ ಅವರು ಬಾಯಿಯ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜೆಸಿಐ15 ರ ವಲಯಾಧಿಕಾರಿ ರವಿ ಕಕ್ಕೆಪದವು, ಪೂರ್ವ ವಲಯಾಧ್ಯಕ್ಷ ಚಂದ್ರಶೇಖರ ನಾಯರ್, ಆಶ್ರಮಶಾಲೆ ಮುಖ್ಯಗುರುಗಳು ಕೃಷ್ಣಪ್ಪ ಗೌಡ, ಯೋಜನಾ ನಿರ್ದೇಶಕ ಸವಿತಾ ಭಟ್, ನಿಕಟಪೂರ್ವಾಧ್ಯಕ್ಷ ಮೋನಪ್ಪ, ಜೇಸಿರೇಟ್ ಅಧ್ಯಕ್ಷ ಆಶಾ ಶೇಷಕುಮಾರ್, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರವಿಕಕ್ಕೆಪದವು ಹಾಗು ಶೇಷಕುಮಾರ್ ಅವರು ದೀವಿಗೆ ಎಂಬ ಪುಸ್ತಕವನ್ನು ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ನೀಡಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel