ಸುಬ್ರಹ್ಮಣ್ಯ ದೇವಸ್ಥಾನ -ಮಠ ವಿವಾದ : ಸುಬ್ರಹ್ಮಣ್ಯ ವಿಹಿಂಪ – ಜಿಲ್ಲಾ ವಿಹಿಂಪ ಭಿನ್ನ ನಿಲುವು….?

July 9, 2019
11:07 AM

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಕಳೆದ ಕೆಲವು ಸಮಯಗಳಿಂದ ಚರ್ಚೆ, ವಿವಾದ, ಮಾತುಕತೆಗಳು ನಡೆಯುತ್ತಿವೆ. ಕಾರಣ ಸರ್ಪಸಂಸ್ಕಾರ ಸೇವೆ.

Advertisement
Advertisement
Advertisement

ಈ ವಿವಾದ ತೀವ್ರ ಸ್ವರೂಪ ಪಡೆಯುವ ವೇಳೆ ವಿಶ್ವ ಹಿಂದೂ ಪರಿಷದ್ ಪ್ರವೇಶ ಪಡೆದು ರಾಜಿಯಲ್ಲಿ ಮುಗಿಸುವ ಹಂತಕ್ಕೆ ಬಂದಾಗ ಜಿಲ್ಲಾ ವಿಶ್ವಹಿಂದೂ ಪರಿಷದ್ ಮಠದ ಪರವಾಗಿ ನಿಂತು ಮಾತುಕತೆ ನಡೆಸಿತು.

Advertisement

ಇದೀಗ ಕುಕ್ಕೆ ಸುಬ್ರಹ್ಮಣ್ಯದ ಸ್ಥಾನೀಯ ವಿಶ್ವಹಿಂದೂ ಪರಿಷದ್ ಮುಖಂಡರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪರವಾಗಿ ನಿಂತು ಸುದ್ದಿಗೋಷ್ಠಿಯಲ್ಲಿ  ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಕಿಶೋರ್ ಶಿರಾಡಿ ದೇವಸ್ಥಾನ ಪರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ್ದಾರೆ.

ಇಷ್ಟೆಲ್ಲಾ ವಿವಾದವಾದಾಗಲೂ ಸಂಘ ಪರಿವಾರದ ಹಿರಿಯರು ಮಧ್ಯಸ್ಥಿಕೆಗೆ ಮುಂದಾಗಲಿಲ್ಲ. ಆದರೆ ವಿ ಹಿಂ ಪ ಮಾತ್ರಾ ಸ್ಥಳೀಯ ಘಟಕ ಹಾಗೂ ಜಿಲ್ಲಾ ಘಟಕದ ನಡುವೆ ಅಭಿಪ್ರಾಯ ವ್ಯತ್ಯಾಸ ಇರುವುದು ಸ್ಟಷ್ಟವಾಗಿದೆ.

Advertisement

ಕಳೆದ ಕೆಲವು ಸಮಯಗಳಿಂದ ಸಂಘ ಪರಿವಾರದ ನಿಲುವಿನಲ್ಲಿ ವ್ಯತ್ಯಾಸ ಕಾಣುತ್ತಿದೆ. ಜಾತಿ ರಹಿತ, ಹಿಂದೂ ಸಮಾಜ ಎನ್ನುವ ಸಿದ್ಧಾಂತ ಈಗ ದೂರವಾಗುತ್ತಿದೆಯೇ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ. ಸುಬ್ರಹ್ಮಣ್ಯದ ವಿಚಾರದಲ್ಲೂ ಮಠದ ಪರವಾಗಿ ವಿ ಹಿಂ ಪ ಜಿಲ್ಲಾ ಸಮಿತಿ ಮಾತನಾಡಿದರೆ  ಸ್ಥಳೀಯ ವಿ ಹಿಂಪ ದೇವಸ್ಥಾನದ ಪರವಾಗಿ ಮಾತನಾಡಲು ಕಾರಣವೇನು ? ಎಂಬುದು ಸಾಮಾನ್ಯ ಕಾರ್ಯಕರ್ತರಲ್ಲೂ ಚಿಂತನೆಗೆ ಕಾರಣವಾಗುತ್ತದೆ.

ದಕ್ಷಿಣ ಕನ್ನಡದಲ್ಲಿ ಸಂಘ ಪರಿವಾರದ ಇತ್ತೀಚೆಗಿನ ನಡೆಗಳು ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಒಂದು ಸಮುದಾಯದ ಕಡೆಗೆ ಓಲೈಕೆ, ಕೆಲವು ನಿರ್ಧಾರಗಳಲ್ಲಿ ತಾರತಮ್ಯ ಸೇರಿದಂತೆ ವಿವಿಧ ಘಟನೆಗಳ ಬಗ್ಗೆ ಈಗ ಚರ್ಚೆಯಾಗುತ್ತಿದೆ.  ಕೆಲವು ಸಮಯದ ಹಿಂದೆ ಡಿ ಸಿ ಸಿ ಬ್ಯಾಂಕ್ ಚುನಾವಣೆಯ ಸಂದರ್ಭ ನಡೆದ ಅಡ್ಡ ಮತದಾನ , ಈ ಸಂದರ್ಭ ಸಹಕಾರ ಭಾರತಿ ನಡೆ, ಸಂಘ ಪರಿವಾರದ ನಿರ್ಧಾರಗಳು, ಚುನಾವಣೆಯ ಸಂದರ್ಭ ಬಿಜೆಪಿ ನಡೆ ಇದರಲ್ಲೂ ಸಂಘ ಪರಿವಾರದ ನಡೆಗಳು ಚರ್ಚೆಗೆ ಕಾರಣವಾದರೆ ಇಂತಹ ಹಲವು ಸಂಗತಿಗಳು ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈಗ ಅದೇ ಸಾಲಿಗೆ ಕುಕ್ಕೆ ಸುಬ್ರಹ್ಮಣ್ಯದ ವಿವಾದವೂ ಸೇರಿಕೊಂಡಿದೆ.

Advertisement

 

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ
ತೀರ್ಥಹಳ್ಳಿ ಮೊದಲ ಮಳೆ ವ್ಯಕ್ತಿ ಬಲಿ | ಶಿವಮೊಗ್ಗದಲ್ಲೂ ಗಾಳಿ ಮಳೆ |
April 19, 2024
10:02 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ
April 18, 2024
10:09 PM
by: ದ ರೂರಲ್ ಮಿರರ್.ಕಾಂ
ಆದರ್ಶ ಜೀವನ ಮತ್ತು ಪರಿಸರ ಸ್ನೇಹಿ ನೀತಿ ತಿಳಿಸುವ ಮಂಗಟ್ಟೆ ಹಕ್ಕಿಗಳು…
April 18, 2024
4:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror