ಸುಬ್ರಹ್ಮಣ್ಯ ದೇವಸ್ಥಾನ-ಮಠ ವಿವಾದ : ಸುಳ್ಳು ಕೇಸುಗಳ ಬಗ್ಗೆ ವಿಮರ್ಶೆಗೆ ಮಾಜಿ ಟ್ರಸ್ಟಿಗಳ ಸಭೆ ನಡೆಸಲು ನಿರ್ಧಾರ

July 9, 2019
9:00 AM

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಅನಧಿಕೃತ ಪೂಜೆ ನಡೆಸುವುದು, ದೇವಸ್ಥಾನಕ್ಕೆ ಬರುವ ಭಕ್ತರನ್ನು ದಾರಿ ತಪ್ಪಿಸಿ ಮಠದಲ್ಲಿ ಹಾಗೂ ಖಾಸಗಿ ಸ್ಥಳಗಳಲ್ಲಿ ಮಾಡುವುದು, ಬೇರೆ ಕಡೆ ಪೂಜೆ ಮಾಡಲು ಪ್ರೇರಣೆ ನೀಡುವ ವ್ಯಕ್ತಿಗಳನ್ನು ವಿರೋಧಿಸಿದ್ದಕ್ಕೆ ಮಠದ ಬೆಂಬಲಿಗರು ಎನಿಸಿಕೊಂಡವರು ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಟ್ರಸ್ಟಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿ ತಿಳಿಸಿದ್ದಾರೆ.

Advertisement
Advertisement
Advertisement

 

Advertisement

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು  ಬೌದ್ಧಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಕಾನೂನು ಚೌಕಟ್ಟಿನೊಳಗೆ ಹೋರಾಟ ನಡೆಸಲು ದೇಗುಲದ ಮಾಜಿ ಟ್ರಸ್ಟಿಗಳು, ದೇವಸ್ಥಾನದ ಹಿತ ಬಯಸುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹಾಗೂ ದೇವಸ್ಥಾನದ ಭಕ್ತರ ಸಭೆಯನ್ನು ಅ.5 ರಂದು ಸುಬ್ರಹ್ಮಣ್ಯ ದೇವಸ್ಥಾನದ ಉತ್ತರಾಧಿ ಮಠದಲ್ಲಿ ಕರೆಯಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ಹಿತಾರಕ್ಷಣಾ ವೇದಿಕೆ ತಾಲೂಕು ಸಮಿತಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ ಎಂದು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯವ ಪ್ರಮುಖ ಸೇವೆಗಳನ್ನು ಮಠ ಹಾಗೂ ಖಾಸಗಿ ಸ್ಥಳಗಳಲ್ಲಿ ನಡೆಸುತ್ತಿರುವುದು ಸರಿಯಲ್ಲ. ಇದರಿಂದ ಅಹಿತಕರ ಘಟನೆಗಳಿಗೆ ಎಡೆ ಮಾಡಿ ಕೊಡುತ್ತಿದೆ. ದೇವಸ್ಥಾನಕ್ಕೆ ಸೇವೆ ಸಲ್ಲಿಸಲು ಬರುವ ಭಕ್ತರನ್ನು ದಾರಿ ತಪ್ಪಿಸಿ ಖಾಸಗಿಯಾಗಿ ನಡೆಸುವುದು ತಪ್ಪು. ಅದು ಮಠ, ಮನೆ ಅಥವಾ ಖಾಸಗಿ ಸ್ಥಳವೇ ಆಗಿದ್ದರೂ ಅದನ್ನು ವಿರೋಧಿಸುತ್ತೇವೆ. ಅನಾಧಿಕೃತ ಸೇವೆ ನಡೆಸುವುದಷ್ಟೆ ಅಲ್ಲ ಅನಧಿಕೃತವಾಗಿ ಬೇರೆ ಕಡೆ ಪೂಜೆ ನಡೆಸುವಂತೆ ಪ್ರೇರೆಪಿಸುವುದು ಕೂಡ ತಪ್ಪು ಹೀಗಾಗಿ ಇದೆಲ್ಲವನ್ನು ನಿಲ್ಲಿಸುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.

Advertisement

ಮಠದಲ್ಲಿ ನಡೆಯುತ್ತಿರುವ ಅನಧಿಕೃತ ಪೂಜೆ ವಿರುದ್ಧ ಧ್ವನಿ ಎತ್ತಿದವರ ಮತ್ತು ದೇವಸ್ಥಾನದ ಪರವಿರುವ ಕೆಲ ಮಾಜಿ ಟ್ರಸ್ಟಿಗಳ ವಿರುದ್ಧ ರಾಜಕೀಯ ಒತ್ತಡ ತಂದು ಸುಳ್ಳು ಕೇಸು ಹಾಕುತ್ತಿರುವುದು ಮಠದವರಿಗೆ ಶೋಭೆ ತರುವಂತದಲ್ಲ, ಹಿಂದೂ ದೇವಸ್ಥಾನದ ಉಳಿತಿಗಾಗಿ ಹೋರಾಟ ನಡೆಸುತ್ತಿರುವವರ ವಿರುದ್ಧ ಈ ರೀತಿ ಸುಳ್ಳು ಕೇಸು ದಾಖಲಿಸಿ ಮಟ್ಟ ಹಾಕುವುದು ಗಂಭೀರ ವಿಚಾರ. ಮುಂದೆ ದೇವಸ್ಥಾನದ ಪರ ಮಾತನಾಡುವುದೇ ತಪ್ಪು ಎನ್ನುವ ಭಾವನೆಯೂ ಉಂಟಾಗುವುದು. ಇದು ಆತಂಕಕಾರ ಬೆಳವಣಿಗೆ. ನಿರಂತರವಾಗಿ ಕೇಸು ದಾಖಲಿಸುವುದು, ಲಾಯರ್ ನೊಟೀಸ್ ನೀಡುವುದು ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಹೇಳಿದರು. ಈ ನಿಟ್ಟಿನಲ್ಲಿ ಅ.5 ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುವುದು. ಪಕ್ಷಭೇಧ ಮರೆತು ಎಲ್ಲ ಮಾಜಿ ಟ್ರಸ್ಟಿಗಳು ಅಂದಿನ ಸಭೆಯಲ್ಲಿ ಪಾಲ್ಗೋಳ್ಳಲು ವಿನಂತಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಮೋನಪ್ಪ ಮಾನಾಡು, ಜಯಪ್ರಕಾಶ ಕೂಜುಗೋಡು ಮತ್ತು ಹಿಂದೂ ಮುಖಂಡ ಅಶೋಕ ಆಚಾರ್ಯ ಉಪಸ್ಥಿತರಿದ್ದರು.

Advertisement

 

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 18-04-2024 | ಹಲವು ಕಡೆ ಮಳೆಯ ಸೂಚನೆ ಇದೆ….,ಆದರೆ ಮಳೆಯಾಗುತ್ತಾ…? | ಹಾಗಾದರೆ ಮಳೆ ಯಾವಾಗ..?
April 18, 2024
11:03 AM
by: ಸಾಯಿಶೇಖರ್ ಕರಿಕಳ
ಮೇಘಾಲಯದಲ್ಲಿ ಚುನಾವಣೆಗೆ ಅಡಿಕೆ ಇಶ್ಯೂ | ಅಕ್ರಮ ಅಡಿಕೆ ಸಾಗಾಟದ ಮೌನದ ಬಗ್ಗೆ ಪ್ರಶ್ನಿಸಿದ ಅಡಿಕೆ ಬೆಳೆಗಾರರು |
April 18, 2024
10:45 AM
by: ದ ರೂರಲ್ ಮಿರರ್.ಕಾಂ
ದುಬೈ ಭಾರೀ ಮಳೆಗೆ ಕಾರಣ ಏನು…? | ನೀರಿಗಾಗಿ ನಡೆದ “ಮೋಡ ಬಿತ್ತನೆ” ಕಾರಣವೇ..? ತಾಪಮಾನ ಏರಿಕೆ ಕಾರಣವೇ..? | ಚಿಂತಿಸುತ್ತಿದ್ದಾರೆ ಹವಾಮಾನ ತಜ್ಞರು |
April 17, 2024
10:44 PM
by: ದ ರೂರಲ್ ಮಿರರ್.ಕಾಂ
ಬೆಳಿಗ್ಗೆ ತಿಂಡಿನಾ – ಊಟಾನಾ ? ಇದು ಸರಿಸುಮಾರು ಎಲ್ಲರ ಪ್ರಶ್ನೆ?
April 17, 2024
4:52 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror