ಸುಬ್ರಹ್ಮಣ್ಯ: ಸರ್ಪ ಸಂಸ್ಕಾರ ಸೇರಿದಂತೆ ಇತರ ಸೇವೆಗಳ ಬಗ್ಗೆ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಸಮಿತಿ ನಡುವೆ ನಡೆಸುವ ಸಂಧಾನ ಸಭೆ ಸುಬ್ರಹ್ಮಣ್ಯದಲ್ಲೇ ನಡೆಯಬೇಕು ಎಂದು ಆದಿವಾಸಿ ಮಲೆಕುಡಿಯ ಜನಾಂಗದ ಮುಖಂಡ ಎ.ವಿ ನಾಗೇಶ್ ಒತ್ತಾಯ ಮಾಡಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಸಂಪುಟ ನರಸಿಂಹ ಮಠ ಸಮಸ್ತ ನಾಡಿನ ಹಿಂದೂ ಸಮಾಜದ ಧಾರ್ಮಿಕ ಕೇಂದ್ರವಾಗಿದೆ. ಎರಡು ಧಾರ್ಮಿಕ ಸಂಸ್ಥೆಗಳ ಸಮಸ್ಯೆಯನ್ನು ಪರಿಹಾರ ಮಾಡುವವರು ಮತ್ತು ಸಂದಾನ ಕಾರ್ಯ ನಡೆಸುವವರು ಶ್ರೀ ಕ್ಷೇತ್ರದಲ್ಲೇ ನಡೆಸಬೇಕು. ಈ ಬಗ್ಗೆ ಇನ್ಯಾವುದೋ ಸ್ಥಳದಲ್ಲಿ ನಡೆಸುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಗರ್ಭಗುಡಿಯಲ್ಲಿ ಆರಾಧನೆ ಮಾಡುತ್ತಿರುವ ಗಣಪತಿ ದೇವರ ವಿಗ್ರಹವನ್ನು ಮೊದಲು ಇದ್ದಂತಹ ಜಾಗದಲ್ಲೇ ಪ್ರತಿಷ್ಠಾಪಿಸಿ ಆರಾಧಿಸಬೇಕು. ಶ್ರೀ ಮಠದ ನರಸಿಂಹ ಗುಡಿಗೆ ಬೇರೆ ಜಾಗದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದ ನಾಗೇಶ್ ಶ್ರೀ ಶಂಕರಾಚಾರ್ಯರ ಮಹಾ ಸಂಸ್ಥಾನ, ಶೃಂಗೇರಿ ಶಾರದಾಪೀಠದ ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ಸಮ್ಮುಖದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೇ ಸಮಸ್ಯೆಯ ಪರಿಹಾರ ಸಂಧಾನ ಮಾತುಕತೆ ನಡೆಯಬೇಕು.ಸಂಧಾನ ಮಾತುಕತೆಯಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತ ಮಂಡಳಿ ಮತ್ತು ದೇವಸ್ಥಾನದ ಹಿತರಕ್ಷಣಾ ವೇದಿಕೆ ಸದಸ್ಯರುಗಳನ್ನು ಹೊರತು ಪಡಿಸಿ ಇನ್ನಿತರ ಯಾವುದೇ ಸಂಘ ಸಂಸ್ಥೆಗಳ, ವ್ಯಕ್ತಿಗಳು ಭಾಗಿಯಾಗಬಾರದು. ಅಲ್ಲದೇ ಸಂಧಾನ ಮಾತುಕತೆ ಸಂದರ್ಭದಲ್ಲಿ ಕ್ಷೇತ್ರದ ಮೂಲ ನಿವಾಸಿಗಳಾದ ಮಲೆಕುಡಿಯ ಸಮುದಾಯದ ಅಭಿಪ್ರಾಯಗಳನ್ನು ಕೂಡ ಪರಿಗಣಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದು ನಾಗೇಶ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಬೆಳ್ಳಿಯಪ್ಪ ಮಲೆಕುಡಿಯ, ಕೇಶವ, ಬಾಬು ಎ.ವಿ, ನಾರಾಯಣ ಡಿ ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…