ಸುಬ್ರಹ್ಮಣ್ಯ: ಮಾ.7 ರಿಂದ ದ್ವಿದಿನಗಳ ಗಾಂಗೇಯ ಟ್ರೋಫಿ ಕ್ರಿಕೇಟ್ ಪಂದ್ಯಾಟ

March 6, 2020
11:34 AM

ಸುಬ್ರಹ್ಮಣ್ಯ: ಸುಮಾರು 40 ವರ್ಷ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯದ ಗಾಂಗೇಯ ಕ್ರಿಕೇಟರ್ಸ್ ಆಶ್ರಯದಲ್ಲಿ ದಿ|| ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥವಾಗಿ, ಅವಿಭಜಿತ ದ.ಕ ಮತ್ತು ಕಾಸರಗೋಡು ಜಿಲ್ಲೆಗಳ ಪ್ರತಿಷ್ಠಿತ ಆಯ್ದ 20 ತಂಡಗಳ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ಗಾಂಗೇಯ ಟ್ರೋಫಿ-2020 ಮಾ.7 ಮತ್ತು 8ರಂದು ಎರಡು ದಿನ ನಡೆಯಲಿದೆ.

Advertisement
Advertisement
Advertisement
Advertisement

ಉದ್ಘಾಟನೆ: ಮಾ.7ರಂದು ಪಂದ್ಯಾಟವನ್ನು ಕಲಾವಿದ ಹರೀಶ್ ಕಾಮತ್ ಉದ್ಘಾಟಿಸಲಿದ್ದಾರೆ. ಗಾಂಗೇಯ ಕ್ರಿಕೇಟರ್ಸ್‍ನ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪೂರ್ವಾಧ್ಯಕ್ಷ ಪಿ.ಬಿ.ಹರೀಶ್ ರೈ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉದ್ಯಮಿ ಸತೀಶ್.ಕೆ.ಮಾನಾಡು ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ಶಿಷ್ಠಾಚಾರ ಅಧಿಕಾರಿ ಎ.ವೆಂಕಟ್ರಾಜ್, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಆರ್.ಶೆಟ್ಟಿಗಾರ್, ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ, ಸುಬ್ರಹ್ಮಣ್ಯ ಗ್ರಾ.ಪಂ.ಪಿಡಿಓ ಮುತ್ತಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಗದೀಶ್ ಪಡ್ಪು, ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ ಮುಖ್ಯಅತಿಥಿಗಳಾಗಿದ್ದಾರೆ. ಸಮಾರಂಭದಲ್ಲಿ ಗಾಂಗೇಯ ತಂಡದ ಪ್ರಾರಂಭದ ನಾಯಕ ಎಂ.ಸರ್ವೋತ್ತಮ ಕಾಮತ್, ಗಾಂಗೇಯ ತಂಡದ ಆಟಗಾರ ಮತ್ತು ಹಿರಿಯರ ಅಂತರಾಷ್ಟ್ರೀಯ ಕ್ರೀಡಾಪಟು ಸುಭಾಶ್ ರೈ ಬಾಳಿಲ, ರಾಜ್ಯ ಮಟ್ಟದ ಶಟ್ಲ್ ಆಟಗಾರರಾದ ಪ್ರಾರ್ಥನ್ ಎಸ್.ಜಿ ಮತ್ತು ಕಾರ್ತಿಕ್.ಆರ್ ಅವರನ್ನು ಸನ್ಮಾನಿಸಲಾಗುವುದು.

Advertisement

ಸಮಾರೋಪ: ಮಾ.8ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಾಂಪಿಯನ್ ಪುರಸ್ಕಾರವನ್ನು ಉದ್ಯಮಿ ವೇಣುಗೋಪಾಲ ಎನ್.ಎಸ್ ಪ್ರಧಾನ ಮಾಡಲಿದ್ದಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಚಾಂಪಿಯನ್ ಚೆಕ್ ಹಸ್ತಾಂತರಿಸಲಿದ್ದಾರೆ. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್ ಆಶಯ ನುಡಿಗಳನ್ನು ತಿಳಿಸಲಿದ್ದಾರೆ. ಕಲಾವಿದ ಕೆ.ಯಜ್ಞೇಶ್ ಆಚಾರ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಉಮೇಶ್ ಕೆ.ಎನ್, ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಮಾಜಿ ಉಪಾಧ್ಯಕ್ಷ ದಿನೇಶ್ ಬಿ.ಎನ್, ಬಸವನಮೂಲೆ ಶ್ರೀ ಬಸವೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ, ಸಮಾಜಸೇವಕ ರವಿ ಕಕ್ಕೆಪದವು, ಉದ್ಯಮಿ ಭವಾನಿಶಂಕರ ಮಲ್ಲಿಗೆಮಜಲು, ದಾನಿ ವಸಂತ ಶರ್ಮ ಆದಿಸುಬ್ರಹ್ಮಣ್ಯ, ಗ್ರಾ.ಪಂ.ಸದಸ್ಯ ಮೋಹನದಾಸ ರೈ, ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ ಮುಖ್ಯಅತಿಥಿಗಳಾಗಿದ್ದಾರೆ. ಸಮಾರಂಭದಲ್ಲಿ ಗಾಂಗೇಯ ತಂಡದ ಪ್ರಾರಂಭದ ನಾಯಕ ಸುಬ್ರಹ್ಮಣ್ಯ ಶಬರಾಯ, ಗಾಂಗೇಯ ತಂಡದ ಹಿರಿಯ ಆಟಗಾರರಾದ ಬಾಲಸುಬ್ರಹ್ಮಣ್ಯ ಭಟ್, ನವೀನ್ ಮಣಿ, ಕಿರಣ್ ಅರಂಪಾಡಿ ಅವರನ್ನು ಗೌರವಿಸಲಾಗುವುದು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಅಭಿಜಿತ್.ಎಸ್.ಕೆ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಅವರಿಗೆ ಸಹಾಯಧನ ಹಸ್ತಾಂತರಿಸಲಗುವುದು.

ಬಹುಮಾನ: ಪಂದ್ಯಾಟದಲ್ಲಿ ವಿಜೇತರಿಗೆ ರೂ 30ಸಾವಿರ ಮತ್ತು 6 ಅಡಿ ಎತ್ತರದ ಗಾಂಗೇಯ ಟ್ರೋಫಿ ನೀಡಲಾಗುವುದು. ದ್ವಿತೀಯ 20ಸಾವಿರ ಮತ್ತು ಫಲಕ, ತೃತೀಯ ಮತ್ತು ಚತುರ್ಥ ತಲಾ 5 ಸಾವಿರ ಮತ್ತು ಫಲಕ, ಶಿಸ್ತು ಬದ್ಧ ತಂಡ ಬಹುಮಾನ ನೀಡಲಾಗುವುದು. ಸರ್ವಾಂಗೀಣ ಆಟಗಾರ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಗೂಟ ರಕ್ಷಕ, ಉತ್ತಮ ಕ್ಷೇತ್ರ ರಕ್ಷಕನಿಗೆ ನಗದು ಮತ್ತು ಫಲಕ ದೊರಕಲಿದೆ. ಅಲ್ಲದೆ ಪ್ರತಿ ಪಂದ್ಯಾಟದಲ್ಲಿ ಪಂದ್ಯ ಶ್ರೇಷ್ಠ ಆಟಗಾರ ಪುರಸ್ಕಾರ ನೀಡಲಾಗುವುದು.

Advertisement

ತಂಡಗಳು: ಪಂದ್ಯಾಟದಲ್ಲಿ ಜೈ ಹಿಂದ್ ಕೃಷ್ಣಾಪುರ, ಆರ್.ಎಸ್.ಬಿ ಕಾರ್ಕಳ, ಅಭಿಮಾನ್ ಮಂಜಲ್ಪಡ್ಪು, ಸ್ವಸ್ತಿಕ್ ಪಡ್ಡೆಯೂರು, ಟೀಂ ಕುಂಬ್ಳೆ, ಪ್ರೆಂಡ್ಸ್ ಬಂಟ್ವಾಳ್, ಗಾಂಗೇಯ ಸುಬ್ರಹ್ಮಣ್ಯ, ಪಂಚಶ್ರೀ ಪಂಜ, ಚಕ್ರವರ್ತಿ ಎಣ್ಮೂರು, ಸ್ಟಾರ್ ಪ್ರೆಂಡ್ಸ್ ಬಿಸಿರೋಡ್, ನವಭಾರತ ಸಾಲ್ಮರ, ಶಿವಗಿರಿ ಹರಿಹರ, ಸ್ವಸ್ತಿಕ್ ಮರ್ಕಂಜ, ಕೆಸಿಸಿ ಪಾಪೆಮಜಲು, ಯುನೈಟೆಡ್ ಈಗಲ್ಸ್ ಪದವು, ಟಾರ್ಗೆಟ್ ಬಾಯ್ಸ್ ಪುತ್ತೂರು, ಆಶೀರ್ವಾದ್ ಅಲೆಕ್ಕಾಡಿ, ಇಚ್ಚಾ ಲಯನ್ಸ್ ಬಪ್ಪಳಿಗೆ, ಗುಡ್‍ಲಕ್ ಪಾಣೆಮಂಗಳೂರು, ಎಂಸಿಸಿ ಸುಳ್ಯ ತಂಡಗಳು ಭಾಗವಹಿಸಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror