ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾಮಹೋತ್ಸವವು ನ.24ರಂದು ಆರಂಭಗೊಂಡು ಡಿ.9ರವರೆಗೆ ನಡೆಯಲಿದೆ. ಆ ಪ್ರಯುಕ್ತ ಕಾರ್ತಿಕ ಬಹುಳ ಏಕಾದಶಿಯ ದಿನವಾದ ಇಂದು ಶ್ರೀ ಕ್ಷೇತ್ರದ ಮಹಾಪ್ರಸಾದ ಮೂಲಮೃತ್ತಿಕೆಯನ್ನು ತೆಗೆಯಲಾಗಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರು ವೈದಿಕ ವಿದಿವಿಧಾನಗಳೊಂದಿಗೆ ಮೂಲಪ್ರಸಾದ ತೆಗೆದು ಬಳಿಕ ಭಕ್ತರಿಗೆ ಪ್ರಸಾದ ಹಂಚಲಾಯಿತು.
ಲಕ್ಷ ದೀಪೋತ್ಸವ ಪೂರ್ವಭಾವಿ ಸಭೆ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ ಸಂದರ್ಭ ನಡೆಯಲ್ಪಡುವ ಲಕ್ಷದೀಪೋತ್ಸವ ನ.26 ರಂದು ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಸಾರ್ವಜನಿಕರು, ವರ್ತಕರು ಮತ್ತಿತರ ಪ್ರಮುಖರ ಸಭೆ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೇರಾಲು ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪೇಟೆ, ದೇವಸ್ಥಾನ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಯಾರ ಉಸ್ತುವಾರಿಯಲ್ಲಿ ದೀಪ ಹಚ್ಚುವ ಬಗ್ಗೆ ನಿರ್ಧರಿಸಿ ಸ್ಥಳಗಳನ್ನು ಹಂಚಲಾಯಿತು.
ಈ ಸಂದರ್ಭ ದೇವಳದ ಸಿಬ್ಬಂದಿ ಪದ್ಮನಾಭ ಶೆಟ್ಟಿಗಾರ್ ಹಾಗೂ ಲೋಕೇಶ್ ಉಪಸ್ಥಿತರಿದ್ದರು. ಶಿವರಾಮ ರೈ, ರವಿ ಕಕ್ಕೆಪದವು, ಪ್ರಶಾಂತ್ ಭಟ್ ಮಾಣಿಲ, ಗೋಪಾಲ ಎಣ್ಣೆಮಜಲು, ರವೀಂದ್ರ, ಪ್ರಶಾಂತ್ ಏನೆಕಲ್ಲು, ಮಾದವ ದೇವರಗದ್ದೆ, ಶ್ರೀನಾಥ್ ಭಟ್, ಶೋಭಿತ್ ನೂಚಿಲ, ಜಯರಾಮ ಎಚ್.ಎಲ್, ಜಯರಾಮ ಕಟ್ಟೆಮನೆ, ಗಣೇಶ್, ಎ. ಸವಿತಾ ಭಟ್, ಭಾರತಿ ದಿನೇಶ್, ಕೃಷ್ಣಮೂರ್ತಿ ಭಟ್, ಪ್ರಾಂಶುಪಾಲ ಉದಯಕುಮಾರ್, ಅಚ್ಯುತ ಗೌಡ, ದಿನೇಶ್ ಸಂಪ್ಯಾಡಿ, ಗಣೇಶ್ ನಾಯರ್, ಡಾ.ಪ್ರಸಾದ್, ಜಯಪ್ರಕಾಶ್, ಸೌಮ್ಯ, ರತ್ನಕುಮಾರಿ ಮತ್ತಿತರರು ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.