ಸುಬ್ರಹ್ಮಣ್ಯ: ಪಂಜದಲ್ಲಿ ಗುರುವಾರ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಸುಬ್ರಹ್ಮಣ್ಯ ಕೆಎಸ್ಸೆಸ್ ಕಾಲೇಜು ದ್ವಿತೀಯ ದರ್ಜೆ ಗುಮಾಸ್ತ ಶೀನಪ್ಪ ರೈ ಅವರ ಅಂತ್ಯಕ್ರಿಯೆ ಶುಕ್ರವಾರ ದೇವರಗದ್ದೆ ನಿವಾಸದಲ್ಲಿ ನಡೆಯಿತು.
Advertisement
ಸುಳ್ಯದಿಂದ ಮೃತರ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ಮೂಲಕ ಸುಬ್ರಹ್ಮಣ್ಯ ಕೆಎಸ್ಸೆಸ್ ಕಾಲೇಜಿಗೆ ತರಲಾಯಿತು. ಬಳಿಕ ವಿದ್ಯಾರ್ಥಿಗಳು ಹಾಗೂ ಸಿಬಂದಿ ವರ್ಗಕ್ಕೆ ಮೃತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಹಾವಿದ್ಯಾಲಯದ ಸಂಚಾಲಕ ನಿತ್ಯಾನಂದ ಮುಂಡೋಡಿ, ವ್ಯವಸ್ಥಾಪನ ಸಮಿತಿ ಸದಸ್ಯರು, ನಿವೃತ್ತ ಪ್ರಾಚಾರ್ಯ ಪ್ರೋ ರಂಗಯ್ಯ ಶೆಟ್ಟಿಗಾರ್, ಪ್ರಾಂಶುಪಾಲ ಪ್ರೋ ಉದಯಕುಮಾರ್ ಕೆ, ಉಪನ್ಯಾಸಕರು, ಭೋಧಕೇತರ ಸಿಬಂದಿಗಳು, ವಿದ್ಯಾರ್ಥಿಗಳು ಸಹಿತ ಅನೇಕ ಮಂದಿ ಗಣ್ಯರು ಹಾಗೂ ಊರವರು ಮೃತರ ಅಂತಿಮ ದರ್ಶನ ಪಡೆದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement