ಸುಬ್ರಹ್ಮಣ್ಯ: ಶ್ರೀಸಂಪುಟ ನರಸಿಂಹ ಮಠದಲ್ಲಿ ಸಾಂಸ್ಕೃತಿಕ ವೈಭವಕ್ಕೆ ಚಾಲನೆ

August 24, 2019
10:28 PM

ಸುಬ್ರಹ್ಮಣ್ಯ: ಸಂಪುಟ ಶ್ರೀನರಸಿಂಹ ಸ್ವಾಮಿ ಮಠದಲ್ಲಿ ಶ್ರೀಗಳ 23 ನೇ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ  ಅನಿರುದ್ಧ ವೇದಿಕೆಯಲ್ಲಿ ಆರಂಭಗೊಂಡ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟನೆ ನಡೆಯಿತು.

Advertisement
Advertisement

ಕಾರ್ಯಕ್ರಮ ಉದ್ಘಾಟಿಸಿದ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತಿರ್ಥ ಶ್ರೀಗಳು, ಕಲಿಯುಗದಲ್ಲಿ ಶ್ರೀಕೃಷ್ಣನ ಆರಾಧನೆ ಮಾಡಿದಲ್ಲಿ ಬೇಗ ಅನುಗ್ರಹ ಪ್ರಾಪ್ತಿಯಾಗುತ್ತದೆ. ಶ್ರೀ ಕೃಷ್ಣನ ಉಪಾಸನೆಗೆ ಅನಂತ ಅನುಗ್ರಹವಿದೆ ಎಂದು ಹೇಳಿದರು.

Advertisement

ಚಾತುರ್ಮಾಸವು ಧಾರ್ಮಿಕ ಆಧ್ಯಾತ್ಮಿಕ ಮಹತ್ವದ ಆಚರಣೆಯೆ ಆಗಿದೆ. ಮಹತ್ವ ಅರಿತು ಸನ್ಮಾರ್ಗದಲ್ಲಿ ನಡೆಯಲು ಸರ್ವಶಕ್ತನಾದ ಭಗವಂತನ ಅನುಗ್ರಹ ಪ್ರಾಪ್ತಿಗಾಗಿ ಈ ವ್ರತವನ್ನು ಆಚರಿಸಲಾಗುತ್ತದೆ ಎಂದರು.
ಆರಂಭದಲ್ಲಿ ಸ್ಥಳೀಯ ಕಲಾವಿದರಿಂದ ವಾದ್ಯ ಸಂಗೀತ ಹಾಗೂ ಮಂಗಳ ವಾದ್ಯ ನಡೆಯಿತು. ಬಳಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕೃಷ್ಣಗಾನಾಮೃತವು ಸ್ಥಳೀಯ ಕಲಾವಿದರುಗಳಿಂದ ನೆರವೇರಿತು. ಕಲಾವಿದ ಯಜ್ಞೇಶ್ ಆಚಾರ್, ರವೀಂದ್ರ ನೂಚಿಲ ಕಾರ್ಯಕ್ರಮ ನಿರ್ವಹಿಸಿದರು.

ಆ.24ರಂದು ಯತಿಗಳಿಂದ ಪ್ರವಚನ ನಡೆಯಿತು. ಸಂಜೆ 5.30 ರಿಂದ ಧಾರ್ಮಿಕ ಆಚರಣೆಗಳಲ್ಲಿ ಸುಧಾರಣೆ ಅನಿವಾರ್ಯವೇ? ಎಂಬ ಕುರಿತು  ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. ಚಿಂತನ ಮಂಥನದ ಸಮನ್ವಯಕಾರರಾಗಿ ಪುತ್ತೂರು ವಿವೇಕಾನಂದ ಕಾಲೇಜಇನ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಭಾಗವಹಿಸಿದ್ದರು. ಸಂವಾದಕರಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿ, ಪ್ರಕಾಶ್ ಮೂಡಿತ್ತಾಯ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಾಜೆ, ವೆಂಕಟ್ರಾಂ ಭಟ್ ಭಾಗವಹಿಸಿದ್ದರು.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ದಂಡು | ರಾಮನ ದರ್ಶನ ಪಡೆದ 1.5 ಕೋಟಿ ಜನ – ಚಂಪತ್‌ ರಾಯ್‌
April 22, 2024
5:17 PM
by: The Rural Mirror ಸುದ್ದಿಜಾಲ
’ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಮೇ 6 ರಂದು ಸಂಕಲ್ಪ ಆರಂಭ |
April 22, 2024
1:28 PM
by: ದ ರೂರಲ್ ಮಿರರ್.ಕಾಂ
500 ವರ್ಷದ ಬಳಿಕ ಅಯೋಧ್ಯೆಯಲ್ಲಿ ರಾಮನವಮಿ | ಬಾಲ ರಾಮನನ್ನು ಸ್ಪರ್ಶಿಸಿದ ಸೂರ್ಯ ತಿಲಕ | ರಾಮನನ್ನು ನೋಡಲು ಬರುತ್ತಿದೆ ಭಕ್ತರ ದಂಡು |
April 17, 2024
2:45 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಬಾಲರಾಮನಿಗೆ ಮೊದಲ ರಾಮನವಮಿ | 19 ಗಂಟೆ ಭಕ್ತರಿಗೆ ದರ್ಶನ ಭಾಗ್ಯ, VIP ಗಳಿಗೆ ನೋ ಎಂಟ್ರಿ | ದೂರದರ್ಶನದಲ್ಲಿ ರಾಮ ನವಮಿ ಆಚರಣೆಯ ನೇರಪ್ರಸಾರ |
April 16, 2024
2:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror