ಸುಬ್ರಹ್ಮಣ್ಯ : ಆಷಾಢ ಶುದ್ಧ ಏಕಾದಶಿ ದಿನ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮ ನಡೆಯಿತು. ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ತಪ್ತ ಮುದ್ರಾಧಾರಣೆ ನೆರವೇರಿಸಿದರು.
ಪ್ರತಿ ವರ್ಷವೂ ಶನೈಕಾದಶಿ ಆಷಾಢ ಶುಕ್ಲ ದಿನ ತಪ್ತ ಮುದ್ರಾಧಾರಣೆಯನ್ನು ಮಠಾಧೀಶರು ನಡೆಸಿಕೊಂಡು ಬರುತ್ತಾರೆ. ಗಣಪತಿ ಹೋಮದ ಬೆಂಕಿಯಲ್ಲಿ ಮುದ್ರೆಗಳನ್ನು ಕಾಯಿಸಿ ದೇಹದ ಮೇಲೆ ಮುದ್ರೆಗಳನ್ನು ಒತ್ತಲಾಗುತ್ತದೆ. ಶ್ರೀಗಳು ತಮ್ಮ ಶಿಷ್ಯರಿಗೆ ಭಕ್ತರಿಗೆ ತಪ್ತ ಮುದ್ರಾಧಾರಣೆ ಹಾಕಿದರು. ಬಲಭುಜ, ಎಡ ಭಾಗದಲ್ಲಿ ಶಂಖವನ್ನು ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಮುದ್ರಿಸಲಾಗುತ್ತದೆ, ಲೋಹ ಮುದ್ರೆಗಳನ್ನು ಹಾಕಿಸಿಕೊಳ್ಳುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವ ನಂಬಿಕೆಯಿಂದ ಅಪಾರ ಭಕ್ತರು ಮುದ್ರಾಧಾರಣೆಯನ್ನು ಹಾಕಿಸಿಕೊಳ್ಳುತ್ತಾರೆ. ಈ ತಪ್ತ ಮುದ್ರಾಧಾರಣೆಯನ್ನು ದೇವಸ್ಥಾನಗಳಲ್ಲಿ ನಡೆಸಲಾಗುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel