ಸುಬ್ರಹ್ಮಣ್ಯ: ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ನಿರ್ದೇಶನದಲ್ಲಿ ಸುನಾದ ಸಂಗೀತ ಕಲಾ ಶಾಲೆ ತನ್ನ ಸುಬ್ರಹ್ಮಣ್ಯ ಶಾಖೆಯ ಸಂಗೀತೋತ್ಸವವನ್ನು ಡಿ. 15 ರವಿವಾರದಂದು ಶ್ರೀ ವನದುರ್ಗಾದೇವಿ ದೇವಸ್ಥಾನ, ಸುಬ್ರಹ್ಮಣ್ಯ ಇದರ ಆವರಣದಲ್ಲಿ ಆಚರಿಸಿಕೊಳ್ಳಲಿದೆ. ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ ಇವರು ದೀಪೋಜ್ವಲನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆನಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಸುನಾದ ವಿದ್ಯಾರ್ಥಿಗಳಿಂದ ನಡೆಯಲಿದ್ದು ಸಂಜೆ ಗಂಟೆ 5 ರಿಂದ ಡಾ.ಅಕ್ಷಯ ನಾರಾಯಣ ಕಾಂಚನ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಯಲಿನ್‍ನಲ್ಲಿ ವಿದ್ವಾನ್ ಬಿ ರಘುರಾಮ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಮೋರ್ಚಿಂಗ್‍ನಲ್ಲಿ ವಿದ್ವಾನ್ ವಿ ಎಸ್ ರಮೇಶ್ ಮೈಸೂರು ಇವರು ಸಹಕರಿಸಲಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel