ಸುರೇಶ್ ರೈ ಸೂಡಿಮುಳ್ಳು ಅವರಿಗೆ ರಾಷ್ಟ್ರೀಯ ಯುವ ಸಮ್ಮಾನ್ ಪುರಸ್ಕಾರ್

October 10, 2019
11:04 AM

ಸವಣೂರು : ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಅವರು 2019 ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪುರಸ್ಕಾರ್ ಆಯ್ಕೆಯಾಗಿದ್ದಾರೆ.

Advertisement
Advertisement
Advertisement
Advertisement

ಪ್ರಶಸ್ತಿ ಪ್ರದಾನ ಸಮಾರಂಭವು ಅ.13ರಂದು ನವದೆಹಲಿಯ ಇಂಡಿಯಾಗೇಟ್ ಬಳಿಯ ಆಂದ್ರಭವನದ ಡಾ.ಬಿ.ಆರ್.ಅಂಬೇಡ್ಕರ್ ಆಡಿಟೋರಿಯಂನಲ್ಲಿ ಕೇಂಂದ್ರ ಸಚಿವರಾದ ರಾಮದಾಸ್ ಅಠವಳೆ,ಜಿ.ಕೃಷ್ಣ ರೆಡ್ಡಿ,ಪ್ರತಾಪ್ ಚಂದ್ರ ಸಾರಂಗಿ,ಕಿರಣ್ ರಿಜಿಲು ,ಅಂತರಾಷ್ಟ್ರೀಯ ಶಾಂತಿ ಪ್ರತಿಪಾದಕ ನೇಪಾಳದ ಆಚಾರ್ಯ ಗುರು ಕರ್ಮ ತನ್‍ಪಾಲ್ ,ರಾಷ್ಟ್ರೀಯ ಯುವನೀತಿಯ ಸ್ಥಾಪಕ ಡಾ.ಎಸ್.ಎನ್.ಸುಬ್ಬರಾವ್,ರಾಜ್ಯಸಭಾ ಸದಸ್ಯ ಡಾ.ನರೇಂದ್ರ ಜಾಧವ್,ರಾಷ್ಟ್ರೀಯ ಮಾನವಹಕ್ಕು ಆಯೋಗದ ಸದಸ್ಯ ಧ್ಯಾನೇಶ್ವರ್ ಮುಳೆ,ಸಂಸದ ಮನೋಜ್ ತಿವಾರಿ ಉಪಸ್ಥಿತಿಯಲ್ಲಿ ನಡೆಯಲಿದೆ.

Advertisement

ಸುರೇಶ್ ರೈ ಸೂಡಿಮುಳ್ಳು ಅವರು 2004-05 ನೇ ಸಾಲಿನಲ್ಲಿ ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿದ್ದ ಅವ„ಯಲ್ಲಿ 527 ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯದ ಗಮನಸೆಳೆದಿದ್ದರು.ಈ ಅವ„ಯಲ್ಲಿ ಸವಣೂರು ಯುವಕ ಮಂಡಲಕ್ಕೆ ಜಿಲ್ಲಾ ಅತ್ಯುತ್ತಮ ಸಾಂಘಿಕ ಪ್ರಶಸ್ತಿ ಹಾಗೂ ಸುರೇಶ್ ರೈ ಅವರಿಗೆ ವೈಯಕ್ತಿಕ ಜಿಲ್ಲಾ ಯುವ ಪ್ರಶಸ್ತಿ ಮತ್ತು ಯುವಕ ಮಂಡಲಕ್ಕೆ ಕರ್ನಾಟಕ ಸರಕಾರದ ರಾಜ್ಯ ಅತ್ಯುತ್ತಮ ಸಾಂಘಿಕ ಪ್ರಶಸ್ತಿ,ಸುರೇಶ್ ರೈ ಅವರಿಗೆ ರಾಜ್ಯ ಯುವ ಪ್ರಶಸ್ತಿ ದೊರಕಿತ್ತು.

2007ರಲ್ಲಿ ಬೆಂಗಳೂರಿನ ಕುಂಬಳಗೋಡಿನಲ್ಲಿ ನಡೆದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತೃಭೂಮಿ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ದೊರಕಿತ್ತು.

Advertisement

ನೆಲ್ಯಾಡಿ ಅಮ್ಮುಂಜೆ ನಾರಾಯಣ ರೈ ಮತ್ತು ರಾಮಕ್ಕೆ ದಂಪತಿಯ ಪುತ್ರನಾಗಿ 1-7-1971ರಾಗಿ ಜನಿಸಿದರು.ಪುಣ್ಚಪ್ಪಾಡಿ ,ಸವಣೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ಸವಣೂರು ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು.ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಕ್ಕೆ ಸೇರಿ ನಂತರ,ಜೀಪು ಚಾಲಕನಾಗಿ ಸವಣೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು.
2008ರಲ್ಲಿ ನರಿಮೊಗರು ಜೆಸಿಐನ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.ಈ ಅವಧಿಯಲ್ಲಿ ವಲಯ ಜೂನಿಯರ್ ಜೇಸಿ ಸಮ್ಮೇಳನ ಜೇನುಗೂಡು ಕಾರ್ಯಕ್ರಮ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದರು.ಈ ಅವ„ಯಲ್ಲಿ ನರಿಮೊಗರು ಜೆಸಿಐಗೆ ಅತ್ಯುತ್ತಮ ಘಟಕ ಪ್ರಶಸ್ತಿ,ಜೆಜೆಸಿ ಸಮ್ಮೇಳನದಲ್ಲಿ ಉತ್ತಮ ಘಟಕ ಪ್ರಶಸ್ತಿ,ಜೆಸಿರೇಟ್ ಸಮ್ಮೇಳನದಲ್ಲೂ ಉತ್ತಮ ಜೇಸಿರೇಟ್ ಘಟಕ,ವ್ಯವಹಾರ ವಿಭಾಗದಲ್ಲಿ 4ನೇ ಸ್ಥಾನ,ವಲಯ ಸಮ್ಮೇಳನದಲ್ಲಿ ಅಂಕಗಳ ಆದಾರದಲ್ಲಿ ರಾಷ್ಟ್ರೀಯ ಪ್ರಶಸ್ತಿ,ಸಮುದಾಯ ಅಭಿವೃದ್ದಿ ಅತ್ಯುತ್ತಮ ಘಟಕ ಸೇರಿದಂತೆ 20ಕ್ಕೂ ಅಧಿಕ ಪ್ರಶಸ್ತಿಗಳು ದೊರಕಿತ್ತು.

ಸವಣೂರು ಎಸ್.ಜೆ.ಸಿ.ಯ ಅಧ್ಯಕ್ಷರಾಗಿ ,ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಸವಣೂರು ಹಿಂದೂಜಾಗರಣ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸವಣೂರು ವರ್ತಕರ ಸಂಘದ ಕಾರ್ಯದರ್ಶಿಯಾಗಿ,ಪುತ್ತೂರು ತಾಲೂಕು ದ್ವನಿ,ಬೆಳಕು ಮತ್ತು ಶಾಮಿಯಾನ ಒಕ್ಕೂಟದ ಅಧ್ಯಕ್ಷರಾಗಿ,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾಗಿ,ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಗೌರವ ಸಲಹೆಗಾರರಾಗಿ,ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |
February 24, 2025
12:04 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror