Advertisement
ಸುದ್ದಿಗಳು

ಸುಳ್ಯಕ್ಕೆ ಸಚಿವ ಸ್ಥಾನ : ಜನತೆಯ ಪಕ್ಷಾತೀತ ಒಕ್ಕೊರಲ ಆಗ್ರಹವಾಗಿತ್ತು

Share

ಸುಳ್ಯ: ಶುದ್ದ ಹಸ್ತರೆಂದು ಜನಜನಿತ ಮಾನ್ಯ ಹಿರಿಯ ಶಾಸಕರಾದ ಅಂಗಾರರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡದೇ ಇರುವುದು ಅಮರ ಸುಳ್ಯದ 70 ವರ್ಷದ ಮೀಸಲು ಕ್ಷೇತ್ರದಲ್ಲಿ ಸತತವಾಗಿ 27 ವರ್ಷ ಅವಧಿಗೆ ಬೆಂಬಲಿಸಿದ ಜನತೆಗೆ, ಶೋಷಿತರಿಗೆ ಮಾಡಿದ ಅನ್ಯಾಯ ಹಾಗೂ ಅವಮಾನ. ಜನರು ಇಟ್ಟಿರುವ ಸುಧೀರ್ಘ ಅದಮ್ಯ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ ,ಯುವ ಘಟಕ (AYW) ಮತ್ತು ವಿದ್ಯಾರ್ಥಿ ಘಟಕ (CYSS)ದ ರಾಜ್ಯ ಸಮಿತಿ ಸದಸ್ಯ ಅಶೋಕ ಎಡಮಲೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement
Advertisement
Advertisement

ಸಚಿವ ಸ್ಥಾನ ಸುಳ್ಯದ ಜನತೆಯ ಪಕ್ಷಾತೀತ ಒಕ್ಕೊರಲ ಆಗ್ರಹವು ಆಗಿತ್ತು.ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು. ವಿರೋಧಿ ಪಕ್ಷಗಳ ಸರಕಾರಗಳು ನಿರ್ಲಕ್ಷ್ಯ ಮಾಡಿರುವ ಸಹಜ ರಾಜಕೀಯ ಪರಿಸ್ಥಿತಿಯು ಕಾರಣವಾಗಿತ್ತು . ಇಂತಹ ಸಂದರ್ಭಗಳಲ್ಲಿ ತನ್ನದೆ ಪಕ್ಷದ ಸರಕಾರದಿಂದ ಸಚಿವರಾಗಿ, ಸುಳ್ಯ ನಗರವನ್ನು ಪುರಸಭೆ ಪರಿವರ್ತನೆ, ಇಲ್ಲಿನ ಶಾಶ್ವತ ಕುಡಿಯುವ ನೀರಿನ ಯೋಜನೆ, ಪಯಸ್ವಿನಿ ಹೊಳೆಗೆ ಕಿಂಡಿ ಅಣೆಕಟ್ಟು, ಯೋಜಿತ ರಬ್ಬರ್ ಕಾರ್ಖಾನೆ ಚಾಲನೆ, ಇಲ್ಲಿನ ಪ್ರಾಕೃತಿಕ ಪರಿಸರದ ಹದಗೆಟ್ಟ ಗ್ರಾಮೀಣ ರಸ್ತೆಗೆ ಕಾಯಕಲ್ಪ, ನೂತನ ಕಡಬ ತಾಲೂಕಿಗೆ ಪ್ರಾಶಸ್ತ್ಯ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಮತ್ತಷ್ಟು ಅನುದಾನ, ಕೃಷಿ ಪ್ರಧಾನ ಆಧಾರಿತ ಕೈಗಾರಿಕೆ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ಅಭಿವೃದ್ಧಿ , ಹಾಲಿ ಸರಕಾರಿ ಶಿಕ್ಷಣದ ಕಾಲೇಜುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇತ್ಯಾದಿಗಳನ್ನು ಕಾರ್ಯರೂಪಕ್ಕೆ ತರಲು ಸಹಕಾರಿ ಎಂಬುದು ಜನಸಾಮಾನ್ಯರ ಅಪೇಕ್ಷೆಯಾಗಿದೆ.

Advertisement

ಆದಾಗ್ಯೂ ಎರಡನೇ ಹಂತದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ದೊರೆತು ಸುಳ್ಯ, ಕಡಬದ ಜೊತೆಗೆ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಸುಳ್ಯದ ಶಾಸಕರು ಗೌರವಕ್ಕೆ ಪಾತ್ರರಾಗಲಿ ಎಂಬುದಾಗಿ ಪಕ್ಷಾತೀತವಾಗಿ ಜನತೆ ಬಯಸಿದ್ದಾರೆ.

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |

ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…

2 hours ago

ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ

ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…

2 hours ago

ಹೊಸರುಚಿ | ಪಪ್ಪಾಯ ಹಣ್ಣು ಬರ್ಫಿ

ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…

11 hours ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…

13 hours ago

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

1 day ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

1 day ago